More

    ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿ – ಬಿ.ವೀರಪ್

    ಬೆಳಗಾವಿ: ನ್ಯಾಯಾಂಗ ಸೇವೆಗಳಲ್ಲಿ ಯುವ ನ್ಯಾಯವಾದಿಗಳಿಗೆ ವಿಪುಲ ಅವಕಾಶಗಳಿವೆ. ಕಾನೂನು ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾಯೋರ್ನ್ಮುಖರಾಗಬೇಕು ಎಂದು ರಾಜ್ಯ ಉಚ್ಚ ನ್ಯಾಯಲಯದ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಕಾರ್ಯಾಧ್ಯಕ್ಷ ಬಿ.ವೀರಪ್ಪ ಹೇಳಿದರು.

    ನಗರದ ಕೆಎಲ್​ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ನ್ಯಾಯವಾದಿ ಸಮುಕ್ತಕರ್ಷ ಟ್ರಸ್ಟ್​ ಹಾಗೂ ಬೆಳಗಾವಿ ವಕೀಲರ ಸಂದ ಸಂಯುಕ್ತಾಶ್ರಾಯದಲ್ಲಿ ಈಚೆಗೆ ಜರುಗಿದ ನ್ಯಾಯಾಂಗ ಸೇವೆಗಳು&ಅವಕಾಶ ಮತ್ತು ಸವಾಲುಗಳು ವಿಷಯದ ಮೇಲೆ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ನ್ಯಾಯಾಧೀಶರ ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದು ಒಂದು ಉದ್ಯೋಗವಲ್ಲ. ಬದಲಾಗಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವಂತಹ ವಿಶಿಷ್ಟವಾದ ಕಾರ್ಯವಾಗಿದೆ. ನ್ಯಾಯಾಧೀಶರು ಯಾವುದೇ ಒತ್ತಡ ಹಾಗೂ ಲೋಭಗಳಿಗೆ ಒಳಗಾಗದೆ ನ್ಯಾಯೋಚಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.

    ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಮುರಳೀಧರ ಪೈ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನ್ಯಾಯಾಂಗ ಸೇವೆಗಳ ೇತ್ರದಲ್ಲಿ ಆಗಿರುವ ತಾಂತ್ರಿಕ ಬದಲಾವಣೆ, ಇ&ಫೈಲಿಂಗ್​, ಆನ್​ಲೈನ್​ ಸೇವೆಗಳನ್ನು ಯುವ ನ್ಯಾಯವಾದಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಕಾನೂನು ಅಕಾಡೆಮಿಯ ಮಾಜಿ ಅಧ್ಯಕ್ಷ ಗೌತಮ ಚಂದ್​,ಆರ್​.ಎಲ್​.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅನಿಲ ಹವಾಲ್ದಾರ್​, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಪ್ರಭು ಶಿವಪ್ಪಾ ಯತ್ನಟ್ಟಿ, ನ್ಯಾಯವಾದಿ ಸಮುಕ್ತಕರ್ಷ ಟ್ರಸ್ಟ್​ನ ಶ್ರೀಧರಪ್ರಭು, ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಯಸಿಂಹ, ಡಾ.ಜ್ಯೋತಿ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts