More

    ಸಾಮಾಜಿಕ ನ್ಯಾಯಕ್ಕೆ ಮಾಡಿದ ವಂಚನೆ,ಕೌತಲ್ ಅಸಮಾಧಾನ

    ಚಿತ್ರದುರ್ಗ: ರಾಜಕೀಯ ಪಕ್ಷಗಳಿಗಿಂತ,ಸಂವಿಧಾನದ ಉಳಿವಿಗಾಗಿ ಸಾಮಾಜಿಕ ಚಳವಳಿಗಳ ಜವಾಬ್ದಾರಿ ದೊಡ್ಡದಾಗಿದೆ ಎಂದು ರಾಜ್ಯಸಾಮಾಜಿ ಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಸಂಚಾಲಕ ಬಸವರಾಜ್‌ಕೌತಲ್ ಹೇಳಿದರು.
    ನಗರದ ರೋಟರಿಭವನದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್‌ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ‘ಸಂವಿಧಾನ ಉಳಿವಿಗಾಗಿ ಮತದಾನದಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ಇಡ ಬ್ಲುೃಎಸ್ ವರ್ಗದವರಿಗೆ ಶೇ.10 ಮೀಸಲಾತಿ ಕೊಡುವಾಗ ತೋರಿಸಿದ ಕಾಳಜಿಯನ್ನು ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣಕ್ಕಾಗಿ ನ ಡೆದ 30ವರ್ಷಗಳ ಹಕ್ಕೋತ್ತಾಯ ಚಳವಳಿಗೆ ತೋರಿಸದೆ ಇರುವುದು ಸಾಮಾಜಿಕ ನ್ಯಾಯಕ್ಕೆ ಮಾಡಿದ ವಂಚನೆಯಾಗಿದ್ದು,ದಲಿತ,ಹಿಂ ದುಳಿದ ಹಾಗೂ ಪ್ರಗತಿಪರರು ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದರು.
    ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ,ಜನ ಸಾಮಾನ್ಯರ ಬದುಕಿನ ಭದ್ರತೆ ಪ್ರಶ್ನೆ ಚುನಾವಣೆಯಲ್ಲಿ ಅಡಗಿದೆ. ಜನರ ನೆಮ್ಮದಿ ಬದುಕಿಗೆ ಸಂವಿಧಾನದ ಉಳಿವಿನ ಅಗತ್ಯವಿದೆ ಎಂದರು.
    ಮಹತ್ವದ ಚುನಾವಣೆಗೆ ಇವಿಎಂಗಳ ಬಳಕೆಯಾಗುತ್ತಿರುವುದು ಪ್ರಜಾಪ್ರಭುತ್ವವನ್ನೇ ಅಣಕ ಮಾಡಿದಂತಾಗಿದೆ. ಮತಯಂತ್ರಗಳ ಬ ಳಕೆ ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ನಿರಂಕುಶ ಆಡಳಿತಕ್ಕೆ ಮುನ್ನುಡಿಯಾಗಿದೆ ಎಂದರು.ಭೀಮನಕೆರೆ ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುರುವನೂರು ಜಗನ್ನಾಥ್,ಕನ್ನಡ ಒಕ್ಕೂಟ ಸಮಿತಿ ಶಫೀವುಲ್ಲಾ,ಉಪನ್ಯಾಸಕ ಇಂಧೂದರ್‌ಗೌತಮ್ ಮಾತನಾಡಿ ದರು.ಅನಸೂಯ,ಹುಲ್ಲೂರು ಕುಮಾರಸ್ವಾಮಿ,ವಕೀಲ ಚಂದ್ರಪ್ಪ,ಲಾಯರ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts