More

    ಸಾಮಾಜಿಕ ಅಭಿವೃದ್ಧಿಗೆ ಸಣ್ಣ ಸಮಾಜಗಳು ಪ್ರಯತ್ನಿಸಲಿ

    ಹುಬ್ಬಳ್ಳಿ: ಸಣ್ಣ ಸಮಾಜಗಳು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಹೇಳಿದರು.

    ಇಲ್ಲಿನ ಜೆ.ಸಿ. ನಗರದ ಮುನ್ಸಿಪಲ್ ಎಂಪ್ಲಾಯಿಸ್ ಹಾಲ್​ನಲ್ಲಿ ಹೂಗಾರ ಸಮಾಜಾಭಿವೃದ್ಧಿ ಪ್ರತಿಷ್ಠಾನ ಹಾಗೂ ಹೂಗಾರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

    ಬಹುಸಂಖ್ಯಾತರು ತಮ್ಮ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆಗಾಗಿ ಹೋರಾಡುತ್ತಿದ್ದು, ಸಣ್ಣ ಸಮುದಾಯವಾದ ಹೂಗಾರ ಸಮಾಜದವರು ಸಹ ಈ ಕುರಿತು ಚಿಂತಿಸಬೇಕು. ಹೂಗಾರ ಸಮುದಾಯದವರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

    ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರು ಸಣ್ಣ ಸಮಾಜಗಳ ಅಭಿವೃದ್ಧಿಗೆ ಶ್ರಮಿಸಿದರು. ಸಣ್ಣ ಸಮಾಜಗಳನ್ನು ಶೋಷಣೆಗೊಳಪಡಿಸುವುದನ್ನು ವಿರೋಧಿಸಿದರು. ಸಂಪ್ರದಾಯದ ಗುಲಾಮಗಿರಿ ಕಿತ್ತೆಸೆಯಲು ಶಿಕ್ಷಣವಂತರಾಗುವಂತೆ ಪ್ರೇರೇಪಿಸಿದರು ಎಂದು ಹೇಳಿದರು.

    ಹಿರಿಯ ನ್ಯಾಯವಾದಿ ಆರ್.ಡಿ. ಹಳಿಂಗಳಿ ಹಾಗೂ ಸನ್ಮಾನ ಸ್ವೀಕರಿಸಿದ ಪೊಲೀಸ್ ಇನ್ಸ್​ಪೆಕ್ಟರ್ ಮಲ್ಲಪ್ಪ ಹೂಗಾರ ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಹಾಗೂ ಗ್ರಾಪಂ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.

    ಶಾಂತಾ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದೇವೇಂದ್ರ ಹೂಗಾರ, ಪರಪ್ಪ ಹೂಗಾರ, ಸುರೇಶ ಹೂಗಾರ, ಎಂ.ಎಂ. ಹೂಗಾರ, ನಾಗರಾಜ ಸಂಗಳಕರ, ಲಲಿತಾ ಹೂಗಾರ, ವಿಜಯಾ ಹೂಗಾರ ಮತ್ತಿತರರಿದ್ದರು. ವೀರಣ್ಣ ಹೂಗಾರ ಸ್ವಾಗತಿಸಿದರು. ಭೀಮರಾಜ ಹೂಗಾರ ನಿರೂಪಿಸಿದರು. ಅಡಿವೇಶ ಜಮಖಂಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts