More

    ಸಾಧನೆಗೆ ದೃಢವಾದ ನಂಬಿಕೆ ಮುಖ್ಯ

    ಯಾದಗಿರಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಸುವ ಛಲ ಅಚಲವಾದ ಮನಸ್ಸು ಹಾಗೂ ದೃಢವಾದ ನಂಬಿಕೆ ನಮ್ಮಲ್ಲಿರಬೇಕು ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಗುರುವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಹಾಪುರದ ಆದರ್ಶ ವಿದ್ಯಾಲಯ ಮಕ್ಕಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಹೆಜ್ಜೆಗೊಂದು ದಾರಿ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಓದಿದ್ದಕ್ಕಿಂತ ಕೇಳಿದ್ದು, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಕೇಳಿಸಿಕೊಂಡಿದ್ದು ದೀರ್ಘಕಾಲ ನೆನೆಪಿನಲ್ಲಿ ಉಳಿಯುತ್ತದೆ ಎಂದರು.

    ಭವಿಷ್ಯದಲ್ಲಿ ಕಠಿಣ ಪರಿಶ್ರಮದಿಂದ ಉನ್ನತ ಹುದ್ದೆ ಪಡೆದು, ದೇಶದ ಸೇವೆ ಮಾಡಲು ಕರೆ ನೀಡಿದ ಅವರು, ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಯಾಗಿದ್ದು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆದುಕೊಳ್ಳಲು ಮುಂದೆ ಬರಬೇಕು. ಐಎಎಸ್, ಐಪಿಎಸ್ ಸೇರಿದಂತೆ ಪರೀಕ್ಷೆಗಳಿಗೆ ಸಿದ್ಧರಾಗುವವರು ಇಂಗ್ಲಿಷ್ ಮತ್ತು ಕನ್ನಡದ ದಿನಪತ್ರಿಕೆಗಳನ್ನು ಕಡ್ಡಾಯವಾಗಿ ಓದಿ. ಕೆಲವು ವಾರಪತ್ರಿಕೆಗಳು, ಮಾಸಪತ್ರಿಕೆಗಳು, ಸಾಮಾನ್ಯ ಜ್ಞಾನ ಕೈಪಿಡಿಗಳು, ವ್ಯಕ್ತಿತ್ವ ವಿಕಾಸದ ಪುಸ್ತಕಗಳನ್ನು ಓದಿ ಎಂದು ತಿಳಿಸಿದರು.

    ಡಿಡಿಪಿಐ ಶಾಂತಗೌಡ ಪಾಟೀಲ್, ಶಿಕ್ಷಣಾಕಾರಿ ಬಸಣ್ಣಗೌಡ ಆಲ್ದಾಳ, ವಿಷಯ ಪರಿವೀಕ್ಷಕ ರಾಜೇಂದ್ರಕುಮಾರ, ಮುಖ್ಯಗುರು ಹಣಮಂತ್ರಾಯ ಹಾಗೂ ವಿದ್ಯಾಥರ್ಿ, ವಿದ್ಯಾಥರ್ಿನಿಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts