More

    ಸಾಧಕರಿಗೆ ಸಾವು ಅಂತಿಮವಲ್ಲ

    ಆಲೂರು: ಮಹಾನ್ ವ್ಯಕ್ತಿಗಳಿಗೆ ಮತ್ತು ಸಾಧಕರಿಗೆ ಸಾವು ಅಂತಿಮವಲ್ಲ. ಇದಕ್ಕೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ, ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರತ್ಯಕ್ಷ ಸಾಕ್ಷಿ ಎಂದು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಭಕ್ತವೃಂದ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಮತ್ತು ನುಡಿನಮನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಈ ಮೂವರು ಸ್ವಾಮೀಜಿಗಳು ಕಾಲಾತೀತವಾಗಿ ಬಾಳಿದ್ದಾರೆ. ಸರ್ವಕಾಲಕ್ಕೂ ಶಾಶ್ವತ ನೆಲೆ ಕಂಡಿದ್ದಾರೆ. ಸೌಹಾರ್ದ ಬದುಕು ಕಲಿಸಿದ ಈ ಮಹಾತ್ಮರು ಜಗತ್ತಿಗೆ ಮಾದರಿಯಾಗಿದ್ದಾರೆ. ಹೀಗಾಗಿ ಸರಳ ತತ್ವಪದಗಳ ಮೂಲಕ ಜನಮನದಲ್ಲಿ ಶಾಶ್ವತವಾಗಿದ್ದಾರೆ ಎಂದು ಹೇಳಿದರು.

    ಅದ್ದೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಿಂದ ಕೆಇಬಿ ವೃತ್ತದವರೆಗೂ ಸಂತರ ಭಾವಚಿತ್ರದೊಂದಿಗೆ ಶೋಭಾಯಾತ್ರೆ ನಡೆಸಲಾಯಿತು. ನಂತರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಉಚಿತ ರಕ್ತದಾನ ಶಿಬಿರನ್ನು ಆಯೋಜಿಸಲಾಗಿತ್ತು.

    ಸಂಕಲಾಪುರ ಮಠದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಕಾರ್ಜುವಳ್ಳಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಜವೇನಹಳ್ಳಿ ಮಠದ ಸಂಗಮೇಶ್ವರ ಸ್ಮಾಮೀಜಿ, ಕಬ್ಬಳಿ ಚುಂಚನಗಿರಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ಆಲೂರು ಭಕ್ತವೃಂದ ಸಂಘದ ಹೆಮಂತ್, ಹರೀಶ್, ಆನಂದ್, ಮಂಜುನಾಥ್ ಆಚಾರ್ಯ, ಸುರೇಶ್, ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts