More

    ಸಾಣೆಕಟ್ಟೆ ಉಪ್ಪಿಗೆ ಸಂರಕ್ಷಿತ ತಳಿ ಪಟ್ಟ

    ಗೋಕರ್ಣ: ಗೋಕರ್ಣದ ಸಾಣೆಕಟ್ಟೆಯಲ್ಲಿ ಇನ್ನೂರು ವರ್ಷಕ್ಕೂ ಹೆಚ್ಚಿನ ಸಮಯದಿಂದ ಉತ್ಪಾದಿಸಲಾಗುವ ಅಪರೂಪದ ನೈಸರ್ಗಿಕ ಉಪ್ಪಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅರ್ಹತೆಯಿದೆ. ಇದನ್ನು ದೇಶದ ಸಂರಕ್ಷಿತ ತಳಿ ಪಟ್ಟಿಗೆ ಸೇರಿಸುವ ಬಗ್ಗೆ ಜೀವ ವೈವಿಧ್ಯ ಮಂಡಳಿ ಸರ್ವ ಪ್ರಯತ್ನ ಮಾಡಲಿದೆ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

    ಸಾಣೆಕಟ್ಟೆಯ ನೈಸರ್ಗಿಕ ಉಪ್ಪಿನಾಗರ ವೀಕ್ಷಿಸಿದ ನಂತರ ನಡೆದ ಸಭೆಯಲ್ಲಿ ಉಪ್ಪು ಮಾಲೀಕರ ಸಹಕಾರ ಸಂಘದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಸಾಣೆಕಟ್ಟೆಯ ಉಪ್ಪಿಗೆ ಜಿಐ (ಸಂರಕ್ಷಿತ ತಳಿ) ಪಟ್ಟ ದೊರೆತಲ್ಲಿ ಇದು ದೇಶದಲ್ಲಿ ಈ ಗೌರವಕ್ಕೆ ಪಾತ್ರವಾದ ಪ್ರಥಮ ಉಪ್ಪಿನ ತಳಿಯಾಗಿ ದಾಖಲಾಗಲಿದೆ. ಇದರಿಂದ ಜಿಲ್ಲೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಉಪ್ಪನ್ನು ಬಳಸುವ ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಕೂಲ ಲಭ್ಯವಾಗಲಿದೆ. ಸಾಣೆಕಟ್ಟೆ ಉಪ್ಪಿನ ವಿಶೇಷತೆಯನ್ನು ದೇಶ ಸ್ತರದಲ್ಲಿ ಪ್ರಸಾರವಾಗುವಂತೆ ಮಾಡಲು ಮನ್ ಕಿ ಬಾತ್​ನಲ್ಲಿ ಇದರ ಬಗ್ಗೆ ಪ್ರಸ್ತುತ ಪಡಿಸಲು ಪ್ರಯತ್ನಿಸಲಾಗುವುದು ಎಂದರು.

    ಅನಂತ ಹೆಗಡೆ ಆಶೀಸರ ಅವರನ್ನು ಸೊಸೈಟಿ ಅಧ್ಯಕ್ಷ ಅರುಣ ಸಂಸ್ಥೆ ವತಿಯಿಂದ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೇಘರಾಜ ನಾಯ್ಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ಪಂಚಾಯಿತಿ ಆಡಳಿತಾಧಿಕಾರಿ ವಸಂತ ಹೆಗಡೆ, ಆರ್.ಜಿ. ಗುನಗಿ, ತಾಪಂ ಇಒ ಸಿ.ಟಿ. ನಾಯ್ಕ, ಸೊಸೈಟಿ ನಿರ್ದೇಶಕ ಗಜಾನನ, ವ್ಯವಸ್ಥಾಪಕ ಅನಿಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts