More

    ಸಾಗರ-ಸೊರಬ ರಸ್ತೆಯಲ್ಲಿ ಅವೈಜ್ಞಾನಿಕ ಡಿವೈಡರ್‌ನಿಂದ ಅಪಘಾತ ಹೆಚ್ಚಳ

    ಸಾಗರ: ನಗರದ ಒಂದನೇ ವಾರ್ಡ್‌ನ ಸೊರಬ ರಸ್ತೆಯಲ್ಲಿ ಅಳವಡಿಸಿರುವ ಡಿವೈಡರ್‌ನಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು ಶಾಸಕರು ಮತ್ತು ನಗರಸಭೆ ಆಡಳಿತ ಇದರ ಬಗ್ಗೆ ಗಮನ ಹರಿಸುವಂತೆ ಶುಕ್ರವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
    ಸ್ಥಳೀಯ ನಿವಾಸಿ ಆರ್.ವಿ.ಹೆಗಡೆ ಮಾತನಾಡಿ, ಇತ್ತೀಚೆಗೆ ಸೊರಬ ರಸ್ತೆಯನ್ನು ಅಗಲೀಕರಣ ಮಾಡಲಾಗಿದ್ದು ಮಧ್ಯಭಾಗದಲ್ಲಿ ಡಿವೈಡರ್ ಅಳವಡಿಸಲಾಗಿದೆ. ಆದರೆ ಅಳವಡಿಸಿರುವ ಡಿವೈಡರ್‌ಗಳು ಅವೈಜ್ಞಾನಿಕವಾಗಿವೆ. ರಸ್ತೆ ವಿಶಾಲವಾಗಿರುವುದರಿಂದ ಮತ್ತು ರಸ್ತೆಯ ನಡುವೆ ವಾಹನ ವೇಗದ ಮಿತಿ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸದೆ ಇರುವುದರಿಂದ ಪ್ರತಿದಿನ ಅಪಘಾತ ಆಗುತ್ತಿವೆ ಎಂದು ದೂರಿದರು.
    ಡಿವೈಡರ್‌ಗಳಿಗೆ ರೇಡಿಯಂ ವ್ಯವಸ್ಥೆ ಮಾಡಿಲ್ಲ. ಇಲ್ಲಿ ಬೀದಿ ದೀಪ ಸಹ ಇಲ್ಲ. ಬೀದಿದೀಪ ಅಳವಡಿಸುವಂತೆ ನಗರಸಭೆಗೆ, ಸ್ಥಳೀಯ ವಾರ್ಡ್ ಸದಸ್ಯರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಅವರು ಕ್ರಮ ತೆಗೆದುಕೊಂಡಿಲ್ಲ. ರಸ್ತೆಯ ನಡುವೆ ಜಾನುವಾರು ಬಂದು ನಿಲ್ಲುತ್ತವೆ. ಇದರಿಂದ ದಾರಿಹೋಕರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಗಣಪತಿ ಹಬ್ಬದ ನಂತರ ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸದೆ ಹೋದಲ್ಲಿ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸುವುದು ಎಂದು ಎಚ್ಚರಿಸಿದರು. ಕಿರಣ್ ಗೌಡ, ಗಣಪತಿ, ಮೋಹನ್, ರಾಮಚಂದ್ರ, ಮರಿಯಪ್ಪ, ಸದಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts