More

    ಸಾಗರ ಮಾರಿಕಾಂಬೆ ಜಾತ್ರೆಗೆ ಬುಧವಾರ ತೆರೆ; ಸುಡು ಬಿಸಿಲು ಲೆಕ್ಕಿಸದೆ ಮೈಲುಗಟ್ಟಲೇ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿರುವ ಭಕ್ತಸಾಗರ

    ಸಾಗರ: ಶ್ರೀ ಮಾರಿಕಾಂಬೆ ಜಾತ್ರೆಯ 9ನೇ ದಿನವಾದ ಮಂಗಳವಾರ ಭಕ್ತರು ಮೈಲುಗಟ್ಟಲೇ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕುಂಕುಮಾರ್ಚನೆ, ವಿಶೇಷ ಪೂಜೆಗಳಲ್ಲಿ ನಿರತರಾಗಿದ್ದರು. ಸರದಿಯಲ್ಲಿ ನಿಂತವರಿಗೆ ವರ್ತಕರು ತಂಪು ಪಾನೀಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.
    ಸಾಗರ ಮಾರಿಕಾಂಬಾ ಜಾತ್ರೆ ಬುಧವಾರ ಸಂಪನ್ನಗೊಳ್ಳಲಿದೆ. ರಾತ್ರಿ ಮಾರಿಕಾಂಬಾ ದೇವಿಯನ್ನು ವನಕ್ಕೆ ಕಳುಹಿಸುವ ಶಾಸ ನಡೆಯಲಿದೆ. ರಾಜಬೀದಿ ಮೆರವಣಿಗೆ ಕೂಡ ನಡೆಯಲಿದೆ. ರಥ ಸಾಗುವ ಬೀದಿಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
    ಕಲ್ಲಂಗಡಿಗೆ ಡಿಮಾಂಡ್:  ಜಾತ್ರೆಯಲ್ಲಿ ಸುಡು ಬಿಸಿಲು ಹೆಚ್ಚಿದೆ. ಜನರು ಬಾಯಾರಿಕೆ ನೀಗಿಸಿಕೊಳ್ಳುವುದಕ್ಕೆ ಕಲ್ಲಂಗಡಿ, ಐಸ್ ಕ್ರೀಂ, ಎಳನೀರಿನ ಮೊರೆ ಹೋಗುತ್ತಿದ್ದಾರೆ. ಜಾತ್ರೆಯಲ್ಲಿ 15 ಕ್ಕೂ ಹೆಚ್ಚು ಕಲ್ಲಂಗಡಿ ಅಂಗಡಿಗಳಿದ್ದು, ಭದ್ರಾವತಿ ತಾಲೂಕಿನ ಕಲ್ಲಂಗಡಿ ಹಣ್ಣಿಗೆ ಡಿಮಾಂಡ್ ಹೆಚ್ಚಿದೆ. ಜನ ಕೆ.ಜಿ.ಗೆ 20 ರೂ.ನಂತೆ ಕಲ್ಲಂಗಡಿ ಖರೀದಿಸುತ್ತಿದ್ದಾರೆ.
    ತಿಂಡಿ ತಿನಿಸುಗಳಿಗೆ ಭಾರೀ ಬೇಡಿಕೆ: ಜಾತ್ರೆಗೆ ಬಂದವರು ಆಟಿಕೆ ಖರೀದಿಗಿಂತ ತಿನ್ನುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಮಸಾಲೆ ದೋಸೆಯಿಂದ ಹಿಡಿದು ಎಲ್ಲ ಅಂಗಡಿಗಳಲ್ಲಿ ನೂಕುನುಗ್ಗಲು ಏರ್ಪಟ್ಟಿದೆ. ದಿನದಿಂದ ದಿನಕ್ಕೆ ವ್ಯಾಪಾರ ವಹಿವಾಟು ಯಶಸ್ವಿಯಾಗಿ ಮುನ್ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts