More

    ಸಾಗರ ನಗರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ; ಮನೆ ಮನೆಗೆ ಕರಪತ್ರ

    ಸಾಗರ: ನಗರಸಭೆಯ ಆಡಳಿತ ವೈಖರಿ ಖಂಡಿಸಿ ದೇಶೀ ಸೇವಾ ಪ್ರತಿಷ್ಠಾನ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
    ಅನ್ಯಾಯವನ್ನು ಪ್ರತಿಭಟಿಸುವ ಮನೋಪ್ರವೃತ್ತಿಯನ್ನು ನಾಗರಿಕ ಸಮಾಜ ಎಂದಿಗೂ ಕಳೆದುಕೊಳ್ಳಬಾರದು. ಮೌನವಾಗಿರುವುದು ಕೂಡ ನಮ್ಮ ದೌರ್ಬಲ್ಯವಾಗಿ ಬಿಡುತ್ತದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಿನ ಪ್ರಜೆಗಳನ್ನು ತಯಾರು ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ, ಈ ಎಲ್ಲಾ ವಿಚಾರಗಳನ್ನು ಜನತೆಗೆ ತಿಳಿಸಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ದೇಶೀ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಧರಮೂರ್ತಿ ಹೇಳಿದರು.
    ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರಗಳು ವ್ಯವಸ್ಥಿತ ಕಾಮಗಾರಿ ನಡೆಸಬೇಕು. ಸಾಗರದಲ್ಲಿ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಗಳು ನಡೆದಿವೆ. ನಗರಸಭೆಯಲ್ಲಿ ಸಾರ್ವಜನಿಕರು ಇ-ಖಾತೆ ಮಾಡಿಸಲು ಪರದಾಡುತ್ತಿದ್ದಾರೆ. ಕೋಟ್ಯಂತರ ರೂ. ವೆಚ್ಚಮಾಡಿ ನಿರ್ಮಿಸಿರುವ ಸಂತೆ ಮಾರುಕಟ್ಟೆ ಹಲವಾರು ವರ್ಷಗಳಿಂದ ಉದ್ಘಾಟನೆಯಾಗದೇ ಸೋರುತ್ತಿದೆ. ಒಳಚರಂಡಿ ಕಾಮಗಾರಿ, ಮೀನು ಮತ್ತು ಮಾಂಸ ಮಾರುಕಟ್ಟೆ ಕಟ್ಟಡ ಅವ್ಯವಸ್ಥಿತಿತವಾಗಿದ್ದು ಕಳಪೆಯಾಗಿವೆ. ಸಾರ್ವಜನಿಕರ ತೆರಿಗೆ ಹಣ ದಂದುವೆಚ್ಚವಾಗಿದೆ. ಈ ಎಲ್ಲಾ ವಿಚಾರಗಳನ್ನು ಪಕ್ಷಾತೀತವಾಗಿ ಸಮಾಜದ ಎದುರು ತೆರೆದಿಡುವ ಕೆಲಸ, ಕರಪತ್ರಗಳನ್ನು ಮನೆಮನಗೆ ತಲುಪಿಸುವ ಚಳವಳಿ ನಡೆಸುತ್ತಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts