More

    ಸಾಗರಮಾಲಾ ಯೋಜನೆಗೆ ವಿರೋಧ

    ಕಾರವಾರ: ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರ ಮುಖಂಡರು ಹಾಗೂ ಇತರ ವಿವಿಧ ಸಂಘಟನೆಗಳು ಪತ್ರ ಚಳವಳಿ ಆರಂಭಿಸಿವೆ.

    ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕಾರವಾರದ ನೂರಕ್ಕೂ ಅಧಿಕ ಯುವಕರು, ಮೀನುಗಾರ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಂಜಿ ರಸ್ತೆಯ ಮುಖ್ಯ ಅಂಚೆ ಕಚೇರಿಯ ಮೂಲಕ ಶುಕ್ರವಾರ ಪತ್ರ ರವಾನಿಸಿದರು.

    ಕವಿ ರವೀಂದ್ರನಾಥ ಟ್ಯಾಗೋರರು ಓಡಾಡಿ ನೆಚ್ಚಿಕೊಂಡಿರುವ ತೀರ ಕಾರವಾರದ್ದು, ಆದರೆ, ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಸಲುವಾಗಿ ತೀರದ ನಡುವೆಯೇ ತಡೆಗೋಡೆ ನಿರ್ಮಾಣ ಮಾಡಿ ಕಡಲ ತೀರವನ್ನು ಪಡೆಯಲು ಸರ್ಕಾರ ಮುಂದಾಗಿದೆ.

    ಈಗಾಗಲೇ ಸೀಬರ್ಡ್ ನೌಕಾ ಯೋಜನೆಗಾಗಿ ಹಲವು ಕಡಲ ತೀರಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಕಾರವಾರ ಜನರ ವಿಹಾರಕ್ಕಾಗಿ ಹಾಗೂ ಮೀನುಗಾರರ ಜೀವನಕ್ಕಾಗಿ ಇರುವ ಏಕೈಕ ಟ್ಯಾಗೋರ್ ಕಡಲ ತೀರ ಉಳಿಸಿಕೊಳ್ಳಲು ನಾವು ಹೋರಾಟ ಮಾಡಬೇಕಾಗಿದೆ.

    ಬಂದರಿನ ಎರಡನೇ ಹಂತದ ವಿಸ್ತರಣೆ ಕೈಬಿಡುವವರೆಗೂ ನಾವು ಹೋರಾಟ ಮುಂದುವರಿಸಲಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಮುಂದಿನ ದಿನದಲ್ಲಿ ಮಂಗಳೂರಿನ ಉಳ್ಳಾಲದವರೆಗೂ ಸಮಸ್ತ ಲಕ್ಷಾಂತರ ಮೀನುಗಾರರಿಂದ ಪ್ರಧಾನಿ ಅವರಿಗೆ ಪತ್ರ ರವಾನಿಸುವ ಕಾರ್ಯ ನಡೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ. ರಾಜು ತಾಂಡೇಲ, ರಾಜೇಶ ಮಾಜಾಳಿಕರ್, ವಿನಾಯಕ ಹರಿಕಂತ್ರ, ಅಭಿಷೇಕ ಕಳಸ, ನೂತನ ಜೈನ್, ನಾಗರಾಜ ಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts