More

    ಸಾಂಸ್ಕೃತಿಕ ವೈಭವ ಸೃಷ್ಟಿಸಿದ ಉತ್ಸವ

    ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಕಾರ ಹಾಗೂ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಸಹಯೋಗದಡಿ ಚಿಟ್ಟಾ ಗ್ರಾಮದ ಭವಾನಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಡಿನಾಡು ಸಾಂಸ್ಕೃತಿಕ ಉತ್ಸವ ಸಾಂಸ್ಕೃತಿಕ ವೈಭವ ಸೃಷ್ಟಿಸಿತು. ಕಲಾವಿದರು ವಿವಿಧ ದೇಸಿ ಕಲೆಗಳ ಪ್ರದರ್ಶನ ನೀಡಿ ನೆರೆದವರನ್ನು ಪುಳಕಿತಗೊಳಿಸಿದರು.

    ಮೀನಾಕ್ಷಿ ಸ್ವಾಮಿ, ಕಾಂಚನಾ, ಚೈತನ್ಯ, ಅರ್ಪಿತಾ ಮತ್ತು ತಂಡದರು ಜಾನಪದ ಗೀತೆ, ಮಲ್ಲಿಕಾರ್ಜುನ ರಾಂಪುರೆ ವಚನ ಗಾಯನ, ಶಾಂತಮ್ಮ ಡೊಣಗಾಪುರ ದಾಸರ ಪದ, ಮನೋಹರ ಹುಪಳಾ, ಶ್ರೀದೇವಿ ವಿಶ್ವನಾಥ ಬಿರಾದಾರ್ ತತ್ವಪದ, ಭಾಗ್ಯಶ್ರೀ ಮತ್ತು ಸಂಗಡಿಗರು ಭರತ ನಾಟ್ಯ, ಶೇಷಪ್ಪ ಚಿಟ್ಟಾ ಹಲಗೆ ವಾದನ, ಪವನ್ ಗೌಡ ತಬಲಾ ವಾದನ, ದೀಪಕ ಚಿಟ್ಟಾವಾಡಿ, ಕುಪೇಂದ್ರ ಮಾಸಿಮಾಡ ಹಾರ್ಮೋನಿಯಂ, ತುಕಾರಾಮ ಭೋಲಾ ಜಾದೂ ಪ್ರದರ್ಶನ ನೀಡಿ ಮಂತ್ರಮುಗ್ಧಗೊಳಿಸಿದರು.

    ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿಗಳು ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದವು. ಸಾಹಿತಿ ರಮೇಶ ಬಿರಾದಾರ್ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಪ್ರೊ.ಉಮಾಕಾಂತ ಮೀಸೆ, ವೀರೇಶ್ವರಿ ಮೂಲಗೆ, ಆತ್ಮಾನಂದ ಬಂಬಳಗಿ ಇತರರು ಸ್ವರಚಿತ ಕವನ ವಾಚಿಸಿದರು.

    ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ರಮೇಶ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಸಂಜೀವಕುಮಾರ ಅತಿವಾಳೆ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಾಪಕೆ, ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬೊಮ್ಮಗೊಂಡೆ, ಪ್ರಮುಖರಾದ ಅನೀಲ ಚಿಟ್ಟಾ, ಚಂದ್ರಕಾಂತ ಚಿಟ್ಟಾವಾಡಿ, ನಾಗರಾಜ ನಂದಗಾಂವ, ಪ್ರಭು ಸಂಗೋಳಗಿ, ಶ್ರೀಮಂತ ಬಾಪುರೆ, ಬೊಮ್ಮಗೊಂಡ ಚಿಟ್ಟಾವಾಡಿ, ರವಿ ಸಿರ್ಸಿ, ರಾಜಕುಮಾರ ಚಿಟ್ಟಾವಾಡಿ, ಲಕ್ಷ್ಮಣ ಎಖ್ಖೇಳ್ಳಿಕರ್ ಇದ್ದರು. ನಾಗೇಶ ಯಾಕತಪುರ ನಿರೂಪಣೆ ಮಾಡಿದರು. ಧನರಾಜ ವಗ್ಗೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts