More

    ಸಹಕಾರ ಸಂಘಗಳ ಬಲವರ್ಧನೆಗೆ ಸಹಕರಿಸಿ

    ನಂಜನಗೂಡು: ರೈತರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಸಂಘಗಳ ಬಲವರ್ಧನೆಗೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ ಸಲಹೆ ನೀಡಿದರು.


    ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.
    ಸಹಕಾರ ಸಂಘಗಳು ಪ್ರಥಮವಾಗಿ ಕರ್ನಾಟಕದಲ್ಲಿ ಪ್ರಾರಂಭವಾದವು. ಈ ಸಂಘಗಳ ಮೂಲಕವೇ ಸರ್ಕಾರಗಳು ರೈತರಿಗೆ ಅನೇಕ ಸೌಲಭ್ಯ ಒದಗಿಸುತ್ತಿವೆ. ರೈತರು ಸಹಕಾರ ಸಂಘಗಳನ್ನು ಉಳಿಸಿಕೊಂಡು ಪ್ರಗತಿ ಸಾಧಿಸಲು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಸಾಲ ಮರುಪಾವತಿಗೊಳಿಸುವಂತೆ ಸಂಘದ ನಿರ್ದೇಶಕರು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

    ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ಎನ್.ಸದಾನಂದ ಮಾತನಾಡಿ, ಸಹಕಾರ ಸಂಘಗಳನ್ನು ಉತ್ತೇಜಗೊಳಿಸುವ ದೃಷ್ಟಿಯಿಂದ ನಬಾರ್ಡ್ ಸಾಲ ಯೋಜನೆಯಡಿ ಹೆಗ್ಗಡಹಳ್ಳಿ ಸಹಕಾರ ಸಂಘಕ್ಕೆ 10 ಲಕ್ಷ ರೂ. ಸಾಲ ನೀಡಲಾಗಿದೆ. ಈ ಹಣವನ್ನು ಬಳಕೆ ಮಾಡಿಕೊಂಡು ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರ ಆತ್ಮ ನಿರ್ಭರ ಭಾರತ ದೃಷ್ಟಿಕೋನದಿಂದ ಸಾಲ ಸೌಲಭ್ಯವನ್ನು ವಿಸ್ತ ರಿಸಿ ರೈತಾಪಿ ವರ್ಗದ ಜೀವನ ಸುಧಾರಣೆಗೆ ಮುಂದಾಗಿದೆ. ಸಂಘಗಳ ಮೂಲಕ ಶೇ.3ರ ದರದಲ್ಲಿ ಕೊಟ್ಟಿಗೆ, ಕುರಿ, ಮೇಕೆ ಸಾಲಗಳನ್ನು ವಿತರಿಸಲಾಗುತ್ತಿದ್ದು, ರೈತರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೆ, ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ತಾಲೂಕಿನ ಸಹಕಾರ ಸಂಘಗಳಿಗೆ ಸುಮಾರು 100 ಕೋಟಿಗೂ ಅಧಿಕ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಬಸಪ್ಪ ಮಾತನಾಡಿ, ಜಿಲ್ಲಾ ಸಹಕಾರ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ 2 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದು ಸಂಘಕ್ಕೆ ಆರ್ಥಿಕ ವರಮಾನ ಹೆಚ್ಚಿಸಲು ನೆರವಾಗಲಿದೆ ಎಂದರು.


    ಸಂಘದ ನಿರ್ದೇಶಕರಾದ ಪ್ರಕಾಶ್, ದೇಬೂರು ಶಿವು, ಎಚ್.ಪಿ.ರೇವಣ್ಣ, ಮಲ್ಲೇಶ್, ಬಸವಶೆಟ್ಟಿ, ಕಮಲಮ್ಮ, ಕುಮಾರ್, ಗ್ರಾಪಂ ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ಗೋವಿಂದರಾಜು, ಕಾಂತರಾಜು, ರಂಗಸ್ವಾಮಿ, ಮುಖಂಡರಾದ ದೊಡ್ಡಂಗಶೆಟ್ಟಿ, ಸಂಘದ ಇಒ ರವಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts