More

    ಸಹಕಾರ ಭಾರತೀಯಿಂದ ವಿಶೇಷ ಕೊಡುಗೆ

    ಶೃಂಗೇರಿ: ಸಹಕಾರ ಭಾರತೀಯು ರಾಜ್ಯದಲ್ಲಿ ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತ ಸಹಕಾರ ಕ್ಷೇತ್ರವನ್ನು ಸದೃಢಗೊಳಿಸುತ್ತಿದೆ ಎಂದು ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ ಹೇಳಿದರು.

    ಶಾರದಾ ನಗರದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಹಕಾರ ಭಾರತೀ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಕ್ಷೇತ್ರ ಬಲಗೊಂಡರೆ ದೇಶ ಸದೃಢವಾಗುತ್ತದೆ. ಸಹಕಾರದಲ್ಲಿ ನಂಬಿಕೆ ಇಟ್ಟಿರುವ ನಾವು ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು. ಹಾಲು ಉತ್ಪಾದಕರ ಸಂಘ, ಅಡಕೆ ಬೆಳೆಗಾರರ ಒಕ್ಕೂಟ, ರೈತರ ಸಂಘಟನೆ ಸೇರಿದಂತೆ ಬೇರೆ ಬೇರೆ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದರು.ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ ನಿರ್ದೇಶಕ ಅಂಬ್ಲೂರು ಸುರೇಶ್ಚಂದ್ರ ಮಾತನಾಡಿ, ಮ್ಯಾಮ್ಕೋಸ್ ಸುದೀರ್ಘ ಇತಿಹಾಸ ಹೊಂದಿದ್ದು, ಎಂಟು ದಶಕದಿಂದ ಅಡಕೆ ಬೆಳೆಗಾರರ ಹಿತ ಕಾಪಾಡುತ್ತಿದೆ. ನಾಲ್ಕು ಜಿಲ್ಲೆ ವ್ಯಾಪ್ತಿ ಹೊಂದಿರುವ ಸಂಸ್ಥೆ 29 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.ಸಹಕಾರ ಭಾರತೀ ಅಧ್ಯಕ್ಷ ನವೀನ್ ಆರ್. ಕಲ್ಕಟ್ಟೆ , ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ವಾಮದೇವ್, ಕಾವಡಿ ಪಿಎಸಿಎಸ್ ನಿರ್ದೇಶಕ ಅಶೋಕ್ ಬೇಗಾನೆ, ಮ್ಯಾಮ್ಕೋಸ್ ನಿರ್ದೇಶಕ ಪರಾಶರ, ಸಹಕಾರ ಭಾರತೀ ಸದಸ್ಯರಾದ ಕೀರ್ತಿಕುಮಾರ್, ಉದಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts