More

    ಸಸಿ ಬೆಳೆಸಿ ತಾಪಮಾನ ತಗ್ಗಿಸಲು ಶ್ರಮಿಸಿ

    ಆಳಂದ (ಕಲಬುರಗಿ): ಹರಿದು ಹೋಗುವ ನೀರನ್ನು ಇಂಗಿಸುವುದು. ಸಸಿ ನೆಟ್ಟು ಅರಣ್ಯ ಬೆಳೆಸುವುದು, ಜಮೀನಿನ ಮಣ್ಣು ಸಂರಕ್ಷಣೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಸಮತಾ ಲೋಕ ಶಿಕ್ಷಣ ಸಮಿತಿ ಅಧ್ಯಕ್ಷರೂ ಆದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

    ಪಟ್ಟಣದ ಸಮತಾ ಲೋಕ ಶಿಕ್ಷಣ ಸಮಿತಿ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ 3ಜೆ ಕ್ಲಬ್​ನಿಂದ ಸೋಮವಾರ ಹಮ್ಮಿಕೊಂಡಿದ್ದ ಸಸಿ ವಿತರಣಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಶುದ್ಧ ಗಾಳಿ, ನೀರು, ಆಹಾರ ಅವಶ್ಯವಾಗಿದೆ. ಹೆಚ್ಚೆಚ್ಚು ಸಸಿಗಳು ಬೆಳೆಸಿ, ಪೋಷಣೆ ಮಾಡಿದಾಗ ಮಾತ್ರ ತಾಪಮಾನ ತಗ್ಗಿಸಲು ಸಾಧ್ಯ ಎಂದರು.

    ಕಲಬುರಗಿಯ ಪ್ರಾದೇಶಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ್ ಮಾತನಾಡಿ, ಸಸಿ ನೆಡುವ ಕಾರ್ಯಕ್ರಮ ಆಂದೋಲನ ರೂಪದಲ್ಲಿ ಸಾಗಬೇಕು. ಅಂದಾಗಲೇ ಅರಣ್ಯ ಹೆಚ್ಚಲು ಸಾಧ್ಯವಾಗುತ್ತದೆ. ಸಮತಾ ಲೋಕ ಶಿಕ್ಷಣ ಸಮಿತಿ 3ಜೆ ಕ್ಲಬ್ ಮೂಲಕ ಮಕ್ಕಳಲ್ಲಿ ಅರಣ್ಯ, ನೀರು, ಜಮೀನು ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

    ಸಿದ್ಧಾರ್ಥ ಹೊಸೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

    ವಲಯ ಅರಣ್ಯಾಧಿಕಾರಿ ಜಗನ್ನಾಥ ಕೋರಳ್ಳಿ, ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ, ಪ್ರಾಂಶುಪಾಲ ನಾಗಣ್ಣಾ ಸಲಗರೆ, ಸಂಜಯ ಪಾಟೀಲ್, ಮುಖ್ಯಗುರು ಶಿವಪುತ್ರಪ್ಪ ಅಲ್ದಿ, ಕಲ್ಲಪ್ಪ ಮಂಠಾಳೆ ಇದ್ದರು.

    ಮೇಘಾ ಪರಿಸರ ಗೀತೆ ಹೇಳಿಕೊಟ್ಟರು. ಶರಣಬಸಪ್ಪ ಇಟಗಿ ಸ್ವಾಗತಿಸಿದರು. ಪ್ರಮೋದ ಪಾಂಚಾಳ ನಿರೂಪಣೆ ಮಾಡಿದರು. ಮುಖ್ಯಗುರು ಎಲ್.ಎಸ್.ಬೀದಿ ವಂದಿಸಿದರು. ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.

    ವಿದ್ಯಾರ್ಥಿಗಳು ಓದುವುದರ ಜತೆಗೆ ಸಮಾಜಮುಖಿ ಕಾರ್ಯಗಳತ್ತಲೂ ಗಮನಹರಿಸಬೇಕು. ಅರನ್ಯ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಕನಿಷ್ಠ 5 ಮರಗಳನ್ನಾದರೂ ರಕ್ಷಣೆ ಮಾಡಬೇಕು. ಹೀಗಾಗಿದಲ್ಲಿ ನಮ್ಮದು ಹಸಿರ ನಾಡು ಆಗಲು ಸಾಧ್ಯ.
    | ಬಿ.ಆರ್. ಪಾಟೀಲ್, ಮಾಜಿ ಶಾಸಕ

    ಸಮೃದ್ಧ ಪರಿಸರವಿದ್ದಾಗ ಮಾತ್ರ ಎಲ್ಲರೂ ಹಾಯಾಗಿ ಜೀವನ ಕಳೆಯಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಅರಣ್ಯದ ಬಗ್ಗೆ ಕಾಳಜಿ ವಹಿಸಬೇಕು. ಜನ್ಮದಿನದ ನಿಮಿತ್ತ ಸಸಿಗಳನ್ನು ನೆಟ್ಟು, ಬೆಳೆಸುವ ಕಾರ್ಯಕ್ಕೆ ಇಲಾಖೆಯಿಂದ ಪ್ರೋತ್ಸಾಹಧನ ನೀಡಲಾಗುವುದು. ಇದರ ಲಾಭ ಪಡೆದುಕೊಳ್ಳಬೇಕು.
    | ಸುನೀಲಕುಮಾರ ಚವ್ಹಾಣ್, ಪ್ರಾದೇಶಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts