More

    ಸವಿತಾ ಸಮಾಜವನ್ನು ಎಸ್ಸಿಗೆ ಸೇರಿಸಿ

    ಕಳಸ: ಸವಿತಾ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಸವಿತಾ ಭಂಡಾರಿ ಸಮಾಜದ ಪದಾಧಿಕಾರಿಗಳು ತಹಸೀಲ್ದಾರ್ ನಂದಕುಮಾರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿ 10 ಲಕ್ಷ ಮಂದಿ ಕ್ಷೌರಿಕ ವೃತ್ತಿದಾರರಿದ್ದಾರೆ. ನಮ್ಮನ್ನು 2ಎ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಆ ವರ್ಗದಲ್ಲಿ ಪ್ರಬಲ ಸಮಾಜದವರು ಇರುವುದರಿಂದ ಉದ್ಯೋಗ ಮತ್ತು ಇತರೆ ಮೀಸಲಾತಿ ಸಿಗದೆ ಅನ್ಯಾಯವಾಗಿದೆ. ಹಾಗಾಗಿ ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

    ನಮ್ಮನ್ನು ಅಸಂಘಟಿತ ವಲಯದ ಕಾರ್ವಿುಕರು ಎಂದು ಪರಿಗಣಿಸಿ ಸರ್ಕಾರದ ಸೌಲಭ್ಯ ನೀಡಬೇಕು. ಬಂಡವಾಳಶಾಹಿಗಳು ಮತ್ತು ಉತ್ತರ ಭಾರತದ ಅನ್ಯ ಧರ್ವಿುಯರಿಂದ ಕ್ಷೌರಿಕ ವೃತ್ತಿಗೆ ರಕ್ಷಣೆ ನೀಡಬೇಕು. ಕ್ಷೌರಿಕ ವೃತ್ತಿ ಅವಹೇಳನ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    ಸವಿತಾ ಭಂಡಾರಿ ಸಮಾಜದ ಅಧ್ಯಕ್ಷ ಮೋಹನ್ ಭಂಡಾರಿ, ಕಾರ್ಯದರ್ಶಿ ರಾಘವೇಂದ್ರ ಭಂಡಾರಿ, ಪದಾಧಿಕಾರಿಗಳಾದ ವಿಜಯ್, ಅನಿಲ್, ಸಂತೋಷ್, ಕೃಷ್ಣ ಭಂಡಾರಿ, ಮಧು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts