More

    ಸವಿತಾ ಮಹರ್ಷಿ ಆದರ್ಶ ಜೀವನಕ್ಕೆ ಅಗತ್ಯ-ಅಪರ ಜಿಲ್ಲಾಧಿಕಾರಿ ಲೋಕೇಶ್ ಹೇಳಿಕೆ 

    ದಾವಣಗೆರೆ: ಸಮಾಜದ ಉನ್ನತಿಗೆ ಶ್ರಮಿಸಿದ ಯುಗಪುರುಷ ಎಂದೇ ಹೆಸರಾದ ಸವಿತಾ ಮಹರ್ಷಿಗಳ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ಶ್ರೀ ಸವಿತಾ ಮಹರ್ಷಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
    ಸಕಲ ಜೀವರಾಶಿಗಳಿಗೆ ಸೂರ್ಯನು ಅನಿವಾರ್ಯವಾದಷ್ಟೇ ಆಧುನಿಕ ಕಾಲದಲ್ಲಿ ಎಲ್ಲ ಜನರಿಗೂ ಸವಿತಾ ಸಮಾಜದ ಸೇವೆ ಅಗತ್ಯವಾಗಿದೆ. ಧಾರ್ಮಿಕವಾಗಿ ಶಿವನ ಎಡಗಣ್ಣಿನಿಂದ ಹುಟ್ಟಿದ ಸವಿತಾ ಮಹರ್ಷಿಯು ದೇವಾನು ದೇವತೆಗಳ ಕಾರ್ಯಗಳನ್ನು ನೆರವೇರಿಸುತ್ತಿದ್ದರು ಎಂದು ಸ್ಮರಿಸಿದರು.
    ತಳಸಮುದಾಯವಾದ ಸವಿತಾ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸದೃಢರಾಗಿ, ಸಂಘಟಿತರಾಗಲು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು. ಸಮಾಜದಲ್ಲಿ ಎಲ್ಲ ಮಕ್ಕಳಿಗೂ ಶಿಕ್ಷಣ ಕಲ್ಪಿಸಬೇಕು. ಅದರಿಂದ ಮಾತ್ರವೇ ಜೀವನ ಸುಧಾರಣೆ ಆಗಲಿದೆ ಎಂದರು. ವೆಂಕಟಾಚಲಪತಿ ವಿಶೇಷ ಉಪನ್ಯಾಸ ನೀಡಿದರು.
    ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಬಾಲರಾಜು, ದಾವಣಗೆರೆ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಹರಿಹರ ತಾಲೂಕು ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಪರಶುರಾಮ, ಗಣೇಶ್, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts