More

    ಸವಲತ್ತುಗಳ ಸದ್ಬಳಕೆಯೊಂದಿಗೆ ರೈತರು ಸುಸ್ಥಿರ ಕೃಷಿಗೆ ಮುಂದಾಗಲಿ


    ಚಿತ್ರದುರ್ಗ: ಪ್ರತಿ ಗ್ರಾಮದಲ್ಲೂ ರೈತ ದಿನ ಆಚರಿಸುವಂತಾದರೆ ಈ ಕಾರ‌್ಯಕ್ರಮ ಸಾರ್ಥಕವಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಅಭಿಪ್ರಾಯಪಟ್ಟರು.
    ಕೃಷಿ ಇಲಾಖೆ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿಯಾಗಿದ್ದ ಚೌಧರಿ ಚರಣ್‌ಸಿಂಗ್ ಅವರ ಸ್ಮರಣಾರ್ಥ, ಪ್ರತಿ ವರ್ಷ ಡಿಸೆಂಬರ್23ನ್ನು ರಾಷ್ಟ್ರೀಯ ರೈತರ ದಿನ ವೆಂದು ಆಚರಿಸಲಾಗುತ್ತಿದ್ದು, ಈ ಕಾರ‌್ಯಕ್ರಮವನ್ನು ಹಳ್ಳಿ,ಹಳ್ಳಿಗಳಲ್ಲೂ ಆಚರಿಸುವಂತಾಗಬೇಕು.
    ‘ಸುಸ್ಥಿರ ಹಾಗೂ ಚೇತರಿಕೆಯತ್ತ ಆಹಾರ ಸುರಕ್ಷತೆಗಾಗಿ ಕ್ರಿಯಾಶೀಲ ಪರಿಹಾರಗಳು’ಘೋಷಣೆಯೊಂದಿಗೆ ಈ ವರ್ಷ ರೈತ ದಿನವನ್ನು ಆಚರಿಸಲಾಗುತ್ತಿದೆ. ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಸುಸ್ಥಿರ ಕೃಷಿಗೆ ಮುಂದಾಗಬೇಕಿದೆ ಎಂದರು.
    ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ ಅವರು ಮಾತನಾಡಿ, ಸೇವಿಸುವ ಆಹಾರ ಬೆಳೆಯಬೇಕೆ ವಿನಾ ಅಗೆದು ಉಗು ಳು ವಂಥ ಬೆಳೆ ಬೆಳೆಯಬಾರದು. ಅಡಕೆ, ಆರ್ಥಿಕ ನೀತಿ ಏರುಪೇರು ಮಾಡುವ ಬೆಳೆಯಾಗಿದೆ. ಕರ್ನಾಟಕ ಕೃಷಿ ಬೆಲೆ ಆಯೋಗದ ವರದಿ ಜಾರಿ ಯಾಗಬೇಕಿದೆ ಎಂದರು.
    ಚಿತ್ರದುರ್ಗ ತಾಲೂಕು ರೈತ ಸಂಘದ ಅಧ್ಯಕ್ಷ ಧನಂಜಯ, ಪ್ರಗತಿಪರ ಕೃಷಿಕ ಆರ್.ಎ.ದಯಾನಂದಮೂರ್ತಿ, ಡಿಎಸ್ ಹಳ್ಳಿ ರೈತ ಜ್ಞಾನೇಶ್ವರ್ ಮಾತನಾಡಿದರು. ಬೇಲೂರಿನ ಪೂರ್ಣಪ್ರಜ್ಞಾ ಅವರು ಉಪನ್ಯಾಸ ನೀಡಿದರು.
    ಚಳ್ಳಕೆರೆ ತಾಲೂಕು ದೇವರ ಮರಿಕುಂಟೆಯ ಪ್ರಗತಿಪರ ರೈತ ಆರ್.ಎ.ದಯಾನಂದ ಮೂರ್ತಿ ಅವರ‘ಮಾರ್ಗದರ್ಶಿ’ಕೃತಿ ಹಾಗೂ ಕೃಷಿ ಭಾ ಗ್ಯಯೋಜನೆ ಮರು ಜಾರಿ ಕುರಿತ ಕರಪತ್ರ ಬಿಡುಗಡೆ ಮಾಡಲಾಯಿತು. ಜಿಲ್ಲೆಯ ಆರು ತಾಲೂಕುಗಳ 14 ಸಾಧಕ ರೈತರನ್ನು ಸನ್ಮಾನಿಸಲಾ ಯಿತು.
    ಹಿರಿಯೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಒ.ಕುಮಾರ್, ತುರುವನೂರು ಶ್ರೀ ಮಂಜುನಾಥ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಎಸ್.ವಿ.ನಾಗರಾಜ್, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಜಿ.ಸಿ.ರಂಗಸ್ವಾಮಿ, ಶಿರಸಿ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ‌್ಯ ಡಾ.ಎ ಚ್.ಶಿವಣ್ಣ, ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್,ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ್, ನಿವೃತ್ತ ಸಹಾಯಕ ಕೃಷಿ ನಿರ್ದೇಶ ಕ ವೀರಭದ್ರರೆಡ್ಡಿ,ರೈತ ಸಂಘದ ಮುಖಂಡರಾದ ಹೊರಕೇರಪ್ಪ, ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿದ್ದಪ್ಪ ಮತ್ತಿ ತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts