More

    ಸರ್ಜಾಪುರ ಗ್ರಾಪಂಗೆ ಸುಸಜ್ಜಿತ ಕಾರ್ಯಾಲಯ, 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಗ್ರಂಥಾಲಯ ಸೇರಿ ಹಲವು ಸೌಲಭ್ಯ

    ಸರ್ಜಾಪುರ: ಎಲ್ಲ ಸೌಲಭ್ಯ ಒಳಗೊಂಡ ಸುಸಜ್ಜಿತ ಗಾಪಂ ಕಾರ್ಯಾಲಯ ನಿರ್ಮಿಸಿ, ಗ್ರಾಪಂ ಅನ್ನು ರಾಜ್ಯಕ್ಕೇ ಮಾದರಿಯಾಗಿಸುವುದಾಗಿ ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಂ. ಶ್ರೀನಿವಾಸ್ ತಿಳಿಸಿದರು.

    ಗ್ರಾಮದಲ್ಲಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ಜಾಪುರ ಗ್ರಾಪಂ ಕಾರ್ಯಾಲಯ ಮತ್ತು ಗ್ರಂಥಾಲಯ ಕಟ್ಟಡಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಸರ್ಜಾಪುರ ಗ್ರಾಪಂ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈಗಿನ ಪಂಚಾಯಿತಿ ಕಟ್ಟಡ ಕಿರಿದಾಗಿದೆ. ಕಚೇರಿಗೆ ಪ್ರತಿನಿತ್ಯ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. ಇದರಿಂದ ಜನರಿಗೆ ವಿವಿಧ ಸೇವೆಗಳನ್ನು ಒದಗಿಸಲು ಕಷ್ಟವಾಗುತ್ತಿದೆ. ಆದ್ದರಿಂದ, ಹೊಸ ಕಾರ್ಯಾಲಯ ನಿರ್ಮಿಸಲಾಗುತ್ತಿದೆ ಎಂದರು.
    ಶಾಸಕ ಬಿ. ಶಿವಣ್ಣ ಮಾತನಾಡಿ, ಸರ್ಜಾಪುರ ಗ್ರಾಮ ಪಂಚಾಯಿತಿಯು ಆನೇಕಲ್ ತಾಲೂಕಿನಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಂಚಾಯಿತಿ. ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ವಿಶೇಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

    ಅಂಗವಿಕಲರಿಗೆ ಪ್ರೋತ್ಸಾಹಧನ: ಗ್ರಾಪಂ ವ್ಯಾಪ್ತಿಯಲ್ಲಿನ ಅಂಗವಿಕಲರ ಅಭ್ಯುದಯಕ್ಕಾಗಿ 83 ಜನರಿಗೆ ತಲಾ 3 ಸಾವಿರ ರೂ. ಧನಸಹಾಯವನ್ನು ಗ್ರಾಮ ಪಂಚಾಯಿತಿ ವಿಶೇಷ ಅನುದಾನದಿಂದ ನೀಡಲಾಯಿತು. ಈ ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವಂತೆ ಲಾನುಭವಿಗಳಿಗೆ ಎಸ್.ಎಂ. ಶ್ರೀನಿವಾಸ್ ಕಿವಿಮಾತು ಹೇಳಿದರು.

    ಡಿಜಿಟಲ್ ಲೈಬ್ರರಿ: ಬಸ್ ನಿಲ್ದಾಣದಲ್ಲಿ ಇರುವ ಹಾಲಿ ಗ್ರಂಥಾಲಯದ ಕಟ್ಟಡ ಶಿಥಿಲಗೊಂಡಿದೆ. ಆದ್ದರಿಂದ, ಅ ಕಟ್ಟಡವನ್ನು ಕೆಡವಿ, 40 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗುವುದು. ಓದುಗರ ಅನುಕೂಲಕ್ಕೆ ತಕ್ಕಂತೆ ಕಟ್ಟಡವನ್ನು ರೂಪಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಹೇಳಿದರು.

    ಗ್ರಾಪಂ ಮಾಜಿ ಅಧ್ಯಕ್ಷರಾದ ಎಸ್.ವೈ. ಶಂಭಯ್ಯ, ಜಗದೀಶ, ಅ್ಜಲ್‌ಖಾನ್, ಕಾರ್ಯದರ್ಶಿ ನಂಜಾರೆಡ್ಡಿ, ಸದಸ್ಯರಾದ ನವೀನಕುಮಾರ್, ಶಿವಕುಮಾರ್, ಡಾ. ಮಂಜುನಾಥ್ ಸರ್ಜಾ, ಎ. ಸತೀಶ್‌ಕುಮಾರ್, ನಸೀಬ್ ಉನ್ನೀಸಾ, ವೆಂಕಟೇಶ್, ಅನಿಲ್, ರೇಣುಕಮ್ಮ, ಚಿನ್ನು, ಚಂದ್ರಕಲಾ, ರೇಣುಕಾ, ಗಾಯತ್ರಿ, ವೀಣಾ, ಮಮತಾ, ಲಲಿತಮ್ಮ, ಶ್ರೀನಿವಾಸ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts