More

    ಸರ್ಕಾರಿ ಶಾಲೆಯಲ್ಲಿ ಸೀಮಂತದ ಸಂಭ್ರಮ: ಪಾಯಸ, ಕೇಸರಿಬಾತ್ ತಿನ್ನಿಸಿ ಪುಟಾಣಿಗಳಿಗೆ ಅನ್ನಪ್ರಾಶನ

    ಕಾರ್ಗಲ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಅಂಗನವಾಡಿ ಸಹಯೋಗದಲ್ಲಿ ಶುಕ್ರವಾರ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೋಷಣ್ ಅಭಿಯಾನ ಮತ್ತು ಪೌಷ್ಟಿಕ ಆಹಾರ ಶಿಬಿರದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗೂ 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ಏರ್ಪಡಿಸಲಾಗಿತ್ತು.
    ಜೋಗ ಕಾರ್ಗಲ್ ಪಪಂ ವ್ಯಾಪ್ತಿಯ ಎಂಟು ಗರ್ಭಿಣಿಯರಿಗೆ ಸೀರೆ, ರವಿಕೆ, ಅರಿಷಿಣ, ಕುಂಕುಮ, ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ಬಳೆ, ಹೂವು, ಬೆಲ್ಲ, ಕಡಲೆ, ಕೊಬ್ಬರಿ ಸೇರಿದಂತೆ ವಿವಿಧ ಪದಾರ್ಥಗಳ ಉಡಿಯನ್ನು ಮಡಿಲಿಗೆ ಸಮರ್ಪಿಸಲಾಯಿತು. ನಂತರ ಆರತಿಯನ್ನು ಬೆಳಗಿ ಅಕ್ಷತೆ ಹಾಕಿ ಆಶೀರ್ವದಿಸಿದರು. 6 ತಿಂಗಳು ತುಂಬಿದ ಮಕ್ಕಳಿಗೆ ಹೆಸರುಬೇಳೆ ಪಾಯಸ ಹಾಗೂ ಕೇಸರಿಬಾತ್ ನೀಡಿ ಅನ್ನಪ್ರಾಶನ ಮಾಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts