More

    ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ

    ರಾವಂದೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೈಸೂರು ಸೇಲ್ಸ್ ಆ್ಯಂಡ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕೈಜೋಡಿಸಲಿದೆ ಎಂದು ಎಂಎಸ್‌ಐಎಲ್ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಎ.ಎಂ.ಚಂದ್ರಪ್ಪ ಭರವಸೆ ನೀಡಿದರು.

    ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನವೀಕರಣಗೊಂಡ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಎಂಎಸ್‌ಐಎಲ್ ಸಂಸ್ಥೆಯು ಎಲ್ಲ ವಸ್ತುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಉದ್ದೇಶದಿಂದ 1966ರಲ್ಲಿ ಸ್ಥಾಪನೆಯಾಗಿದ್ದು, ನಮ್ಮಲ್ಲಿ ಉತ್ಪಾದನೆಗೊಂಡ ವಸ್ತುಗಳಿಗೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ನಮ್ಮ ಉತ್ಪನ್ನಗಳಿಂದ ಬರುವ ಲಾಭದಲ್ಲಿ ಸ್ವಲ್ಪ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡಲಾಗುವುದು ಎಂದರು.

    ಎಂಎಸ್‌ಐಎಲ್ ನಿರ್ದೇಶಕ ಡಾ.ಆರ್.ಡಿ.ಸತೀಶ್ ಮಾತನಾಡಿ, ಎಂಎಸ್‌ಐಎಲ್ ಸಂಸ್ಥೆಯಿಂದ 9.5 ಲಕ್ಷ ರೂ. ವೆಚ್ಚದಲ್ಲಿ ಶಾಲೆಯನ್ನು ನವೀಕರಿಸಲಾಗಿದೆ. ಕಲಿಕೆಗೆ ಬೇಕಾಗುವ ಪೂರಕ ವಾತಾವರಣ ಕಲ್ಪಿಸಲು ಪಾಲಕರು ಹಾಗೂ ಶಿಕ್ಷಕರ ಜತೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

    ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಎಂಎಸ್‌ಐಎಲ್‌ನ ಮೈಸೂರು ವಿಭಾಗದ ವ್ಯವಸ್ಥಾಪಕ ಆರ್.ಎಸ್.ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಲದಪ್ಪ, ಮುಖ್ಯಶಿಕ್ಷಕಿ ಲಿಲ್ಲಿಮೇರಿ, ಎಸ್‌ಡಿಎಂಸಿ ಅಧ್ಯಕ್ಷ ಜಲೇಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಆರ್.ಎಸ್.ವಿಜಯ್‌ಕುಮಾರ್, ಮುಖಂಡರಾದ ಆರ್.ವಿ.ವಿಶ್ವನಾಥ್, ಆರ್.ಎಸ್.ಸುರೇಶ್, ಆರ್.ಆರ್.ಶಶಿಧರ್, ಆರ್.ಎಂ.ಸುಭಾಷ್, ಆರ್.ವಿ.ಸೋಮಶೇಖರ್, ಮಲ್ಲೇಶ್, ಆಶಾ ಮಹೇಶ್, ಆರ್.ಎಸ್.ಪ್ರಕಾಶ್, ಆರ್.ಎಸ್.ಉದಯಕುಮಾರ್, ವಿಜಯೇಂದ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts