More

    ಸರ್ಕಾರಿ ನೌಕರರಿಂದ ದೇಶದ ಅಭಿವೃದ್ಧಿ

    ಬೆಳಗಾವಿ: ಜನಪ್ರತಿನಿಧಿಗಳು ವಿವಿಧ ಯೋಜನೆಗಳನ್ನು ಕೇವಲ ಆದೇಶ ಮಾಡುತ್ತಾರೆ. ಆದರೆ, ಅನುಷ್ಠಾನಕ್ಕೆ ತರುವುದು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ಸರ್ಕಾರಿ ನೌಕರರು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್. ಭೈರಪ್ಪ ಅಭಿಪ್ರಾಯಪಟ್ಟರು. ನಗರದ ನಾಗನೂರು ರುದ್ರಾಕ್ಷಿಮಠದ ಪ್ರಭುದೇವ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಕಿತ್ತೂರು ಕರ್ನಾಟಕ, ಬೆಳಗಾವಿ ವಿಭಾಗದ ಸರ್ಕಾರಿ ನಿವೃತ್ತ ನೌಕರರ ಸಮಾವೇಶ’ ಅವರು ಮಾತನಾಡಿದರು. ಸರ್ಕಾರಿ ನಿವೃತ್ತ ನೌಕರರಿಗೆ ಯಾವುದೇ ಆರೋಗ್ಯ ಭಾಗ್ಯ ಕೊಟ್ಟಿಲ್ಲ. ಗ್ರಾಪಂ ಸದಸ್ಯರಿಂದ ಹಿಡಿದು ಎಲ್ಲ ಜನಪ್ರತಿನಿಧಿಗಳಿಗೆ ವೈದ್ಯಕೀಯ ವೆಚ್ಚ ನೀಡುತ್ತಾರೆ. ಒತ್ತಡದಲ್ಲಿ ಜನರ ಸೇವೆ ಮಾಡಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ನಮಗೆ ಉಚಿತ ಆರೋಗ್ಯ ಭಾಗ್ಯ ನೀಡಬೇಕು. ದೀರ್ಘ ಕಾಯಿಲೆಯಿಂದ ಬಳಲುತ್ತಿರುವ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ಸೇವೆ ನೀಡಬೇಕೆಂದು 2015ರಲ್ಲಿ ಅಂದಿನ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಜಾರಿಗೆ ತರುವಂತೆ ಮಾಡಿದ್ದೆವು. ಆದರೆ, ಈಗ ನಮಗೆ ಆ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿದ್ದೇವೆ. ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಮಾತಿನಂತೆ ತಕ್ಷಣವೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಕಡತ ತರಿಸಿಕೊಂಡು ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

    ಸಂಘದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಕದಂ, ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಉಪಾಧ್ಯಕ್ಷೆ ಶಾರದಮ್ಮ ಮಾತನಾಡಿದರು. ಕೊರಟಗೆರೆ ಬಸವಕಿರಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧ್ಯಕ್ಷ ಎಸ್.ಜಿ.ಸಿದ್ನಾಳ ಅಧ್ಯಕ್ಷತೆ ವಹಿಸಿದ್ದರು. ಅಡಿವೆಪ್ಪ ಬೆಂಡಿಗೇರಿ ಸ್ವಾಗತಿಸಿದರು. ಆರ್.ಎಸ್.ಕಡಿ ಮತ್ತು ಎಂ.ವೈ.ಮೆಣಸಿನಕಾಯಿ ನಿರೂಪಿಸಿದರು. ಮಲ್ಲಪ್ಪ ಮುದಕವಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts