More

    ಸರ್ಕಾರಿ ಜಾಗ ಅತಿಕ್ರಮಣ ಆರೋಪ; ಒತ್ತುವರಿ ತೆರವಿಗೆ ಗ್ರಾಮಸ್ಥರ ಪಟ್ಟು: ತಹಸೀಲ್ದಾರ್‌ಗೆ ದೂರು

    ಸೊರಬ: ಗ್ರಾಮದ ಅಭಿವೃದ್ಧಿಗೆ ಮೀಸಲಿಟ್ಟ ಜಾಗವನ್ನು ಗ್ರಾಮದ ವ್ಯಕ್ತಿಯೇ ಅತಿಕ್ರಮಣ ಮಾಡಲು ಮುಂದಾಗಿದ್ದು, ತೆರವುಗೊಳಿಸಬೇಕು ಹಾಗೂ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಭೈರೇಕೊಪ್ಪ ಗ್ರಾಮಸ್ಥರು ಮಂಗಳವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶೋಭಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದರು.
    ತಾಲೂಕಿನ ಉಳವಿ ಹೋಬಳಿಯ ಭೈರೇಕೊಪ್ಪ ಗ್ರಾಮದ ಸರ್ವೇ ನಂ.24ರಲ್ಲಿ ಶಾಲೆ, ಅಂಗನವಾಡಿ ಕೇಂದ್ರ, ಆಟದ ಮೈದಾನ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 5 ಎಕರೆ ಜಮೀನನ್ನು ಕಾಯ್ದಿರಿಸಲಾಗಿತ್ತು. ಆದರೆ ರುದ್ರಪ್ಪ ಎಂಬಾತ ರಾತ್ರೋರಾತ್ರಿ ಜಾಗವನ್ನು ಅತಿಕ್ರಮಿಸಿ, ಸಾಗುವಳಿ ಮಾಡಲು ಮುಂದಾಗಿದ್ದಾನೆ. 2015ರಲ್ಲೂ ಇದೇ ಜಮೀನಿನಲ್ಲಿ ರುದ್ರಪ್ಪ ಅತಿಕ್ರಮಣಕ್ಕೆ ಮುಂದಾಗಿದ್ದ. ಆಗ ಗ್ರಾಮಸ್ಥರು, ಮಹಿಳೆಯರು ತಹಸೀಲ್ದಾರ್ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದರು.
    ಸ್ಥಳ ಪರಿಶೀಲನೆ ಮಾಡಿದ್ದ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸಾಗರ ಉಪವಿಭಾಗಾಧಿಕಾರಿ ಒತ್ತುವರಿ ತೆರವು ಮಾಡಿಸಿ, ಜಮೀನನ್ನು ಅತಿಕ್ರಮಣ ಮಾಡದಂತೆ ರುದ್ರಪ್ಪಗೆ ಸೂಚನೆ ನೀಡಿದ್ದರು. ಜಾಗಕ್ಕೆ ಸರ್ಕಾರಿ ಜಾಗವೆಂದು ನಾಮಫಲಕ ಹಾಕಲಾಗಿತ್ತು. ಆದರೆ ರುದ್ರಪ್ಪ ಪುನಃ ಜಾಗವನ್ನು ಅತಿಕ್ರಮಣ ಮಾಡಿ, ಅಲ್ಲಿರುವ ನಾಮಫಲಕವನ್ನು ಕಿತ್ತೆಸೆದು ಕಾನೂನು ಉಲಂಘನೆ ಮಾಡಿದ್ದಾರೆ ಎಂದು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts