More

    ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಾಣ

    ಶಿಗ್ಗಾಂವಿ: ಆಶ್ರಯ ಮನೆ ನಿರ್ವಿುಸಿಕೊಳ್ಳಲು ನಿವೇಶನ ಒದಗಿಸುವಂತೆ ಆಗ್ರಹಿಸಿ, ತಾಲೂಕಿನ ಶಿಡ್ಲಾಪುರ ಗ್ರಾಮದ ಕೆಲವರು ಖಾಲಿ ಜಾಗದಲ್ಲಿ ಸರ್ಕಾರದ ಪರವಾನಗಿ ಪಡೆಯದೇ ಗುಡಿಸಲುಗಳನ್ನು ನಿರ್ವಿುಸಿಕೊಂಡ ಘಟನೆ ಶನಿವಾರ ನಡೆದಿದೆ.

    ಶಿಡ್ಲಾಪುರ ಗ್ರಾಮದ ಸುಮಾರು 13 ಕುಟುಂಬಗಳು ಮನೆ ನಿರ್ವಿುಸಿಕೊಳ್ಳಲು ನಿವೇಶನ ಒದಗಿಸುವಂತೆ 15 ದಿನಗಳ ಹಿಂದೆ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಶನಿವಾರ ಬೆಳಗ್ಗೆ ಸರ್ಕಾರದ ಯಾವುದೇ ಮಾರ್ಗಸೂಚಿಗೆ ಕಾಯದೇ ಗ್ರಾಮದ ಖಾಲಿ ಪ್ರದೇಶದಲ್ಲಿ ತಮಗೆ ಬೇಕಾದಷ್ಟು ಜಾಗ ಗುರುತಿಸಿಕೊಂಡು ಗುಡಿಸಲುಗಳನ್ನು ನಿರ್ವಿುಸಿಕೊಂಡಿದ್ದಾರೆ.

    ಕೂಡಲೆ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪ್ರಕಾಶ ಕುದರಿ, ಸಮಸ್ಯೆ ಕುರಿತು ಗ್ರಾಮಸ್ಥರೊಂದಿಗೆ ರ್ಚಚಿಸಿದರು. ಮೊದಲು ನಿವೇಶನ ರಹಿತ ಕುಟುಂಬಗಳ ಸರ್ವೆ ಕಾರ್ಯ ನಡೆಸಲಾಗುತ್ತದೆ. ನಂತರ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ನಿವೇಶನ ಒದಗಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರದ ಸೂಚನೆ ಇಲ್ಲದೆ ಅಕ್ರಮವಾಗಿ ಗುಡಿಸಲು ನಿರ್ವಿುಸಿಕೊಳ್ಳುವುದು ಅಪರಾಧವಾಗಿದ್ದು, ಕೂಡಲೆ ತೆರವುಗೊಳಿಸುವಂತೆ ಸೂಚಿಸಿದರು. ಕಂದಾಯ ನಿರೀಕ್ಷಕ ಶ್ರೀಶೈಲ ಸಜ್ಜನ, ಗ್ರಾಮ ಲೆಕ್ಕಾಧಿಕಾರಿ ನೀಲಕಂಠ ರಾಮಯ್ಯನವರ, ಗ್ರಾಮ ಸೇವಕ ಈರಪ್ಪ ರ್ಬಾ, ರತ್ನವ್ವ ಕಲಕಟ್ಟಿ, ಸುಧಾ ಯಲಗಚ್ಚ, ರೇಣುಕಾ ವಾಲಿಕಾರ, ಮುತ್ತಪ್ಪ ಕಲಕಟ್ಟಿ, ಬಸಪ್ಪ ಸಣ್ಣಮನಿ, ಮಂಜು ಬಡಪ್ಪನವರ, ರಾಘು ಸಣ್ಣಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts