More

    ಸರ್ಕಾರಿ ಆಸ್ಪತ್ರೆ ಬಡವರ ಬೆಳಕು

    ಅಥಣಿ: ತಾಲೂಕಿನ ಅನೇಕ ಬಡಜನರ ಮತ್ತು ನಿರ್ಗತಿಕರ ಬಾಳಿಗೆ ಬೆಳಕಾಗಿರುವ ಅಥಣಿ ಸಾರ್ವಜನಿಕ ಆಸ್ಪತ್ರೆ ಸೇವೆ ಬೆಳಗಾವಿ ಜಿಲ್ಲೆಗೆ ಮಾದರಿಯಾಗಿದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ನೇತ್ರ ಶಸ್ತ್ರಚಿಕಿತ್ಸೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿ, ನನ್ನ ತಂದೆ ಶಾಸಕರಾದ 20ವರ್ಷಗಳಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಅಗತ್ಯ ಆರೋಗ್ಯ ಸೇವೆ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

    100 ಹಾಸಿಗೆ ಸೌಲಭ್ಯವುಳ್ಳ ಆಸ್ಪತ್ರೆಯಲ್ಲಿ ಐಸಿಯು ಘಟಕ, ಸಿಟಿಸ್ಕಾನ್ ಸೌಲಭ್ಯ, ಹೈಟೆಕ್ ಮಾದರಿಯ ಶಸ್ತ್ರಚಿಕಿತ್ಸಾ ವಿಭಾಗ ಹೊಂದಿದ್ದು, ಬಡ ಕುಟುಂಬಗಳಿಗೆ ಅನುಕೂಲವಾಗಿದೆ. ಕಣ್ಣಿನ ಚಿಕಿತ್ಸೆಗಾಗಿ ಮೈಕ್ರೋಸ್ಕೋಪ್‌ಗಾಗಿ ಶಾಸಕರ ನಿಯಿಂದ ಅನುದಾನ ನೀಡುವ ಭರವಸೆ ನೀಡಿದರು. ಚಿಕ್ಕೋಡಿ ವಿಭಾಗಾಕಾರಿ ಮಾಧವ ಗಿತ್ತೆ ಮಾತನಾಡಿ, ಕಣ್ಣು ಬಹಳ ಸೂಕ್ಷ್ಮವಾದ ಅಂಗ. ಕಣ್ಣುಗಳು ಸರಿಯಾಗಿದ್ದರೆ ಮಾತ್ರ ಜಗತ್ತು ನೋಡಬಹುದು. ಹಾಗಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಮೋತಿ ಬಿಂದು ಸಮಸ್ಯೆ ಇರುವವರಿಗೆ ಸರ್ಕಾರದಿಂದ 600ಕ್ಕೂ ಅಕ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದರು. ತಾಲೂಕು ವೈದ್ಯಾಕಾರಿ ಡಾ.ಬಸಗೌಡ ಕಾಗೆ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಇಒ ವಿ.ಎ.ವಾಲಿ, ಅಕಾರಿಗಳಾದ ಬಸವರಾಜ ಯಾದವಾಡ, ಅಶೋಕ ಕಾಂಬಳೆ, ನೇತ್ರ ತಜ್ಞ ಡಾ. ಶರಣಪ್ಪ ಗಡೆದ, ಡಾ.ಮೋಹನ ಜಿಂಕಾ, ಡಾ.ಬಸವರಾಜ ಪಟ್ಟೆದ, ಡಾ.ರಮೇಶ ಹುಲಕುಂದ, ರಾಮಗೊಂಡ ಪಾಟೀಲ, ಎ.ಬಿ.ಗುಳಿಧರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts