More

    ಸರ್ಕಾರದ ಸಾಧನೆ, ಯೋಜನೆ ಜನತೆಗೆ ತಿಳಿಸಿ

    ಗಜೇಂದ್ರಗಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಬಿಜೆಪಿಯ ಎಲ್ಲ ಮೋರ್ಚಾ ಪದಾಧಿಕಾರಿಗಳು ಜನರಿಗೆ ತಿಳಿಸಬೇಕು. ಜಿಪಂ ಹಾಗೂ ತಾಪಂ ಮೀಸಲಾತಿ ವಿಚಾರವಾಗಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಮೀಸಲಾತಿ ಯಾವುದೇ ಬರಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಶಾಸಕ ಕಳಕಪ್ಪ ಬಂಡಿ ಸಲಹೆ ನೀಡಿದರು.
    ಪಟ್ಟಣದ ಸಿಬಿಎಸ್​ಸಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ರೋಣ ಮಂಡಲದ ಕಾರ್ಯಕಾರಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ನಿರ್ವಹಣೆಯಲ್ಲಿ ಪ್ರಧಾನಿ ಹಾಗೂ ಸಿಎಂ ಯುದ್ದೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಸರ್ಕಾರ ಪ್ರತಿದಿನ 50 ಲಕ್ಷ ಜನರಿಗೆ ಲಸಿಕೆ ನೀಡುತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸಿ ಅಧಿಕಾರಕ್ಕೆ ತರಲು ಯಡಿಯೂರಪ್ಪನವರ ಶ್ರಮ ಬಹಳ ಇದೆ ಎಂದರು.
    ಕಾಂಗ್ರೆಸ್​ಗೆ ಅಧ್ಯಕ್ಷರಿಲ್ಲದೆ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಇನ್ನೂ 25 ವರ್ಷ ಕಾಂಗ್ರೆಸ್ ಆಡಳಿತಕ್ಕೆ ಬರುವುದಿಲ್ಲ ಎಂದು ದೆಹಲಿ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆಗೆ ಇನ್ನೂ 2 ವರ್ಷ ಇರುವಾಗಲೇ ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿ ಸ್ಥಾನಕ್ಕಾಗಿ ಕಚ್ಚಾಟ ಪ್ರಾರಂಭವಾಗಿದೆ. ಕಾಂಗ್ರೆಸ್​ನಲ್ಲಿ ಯುವಕರನ್ನು ಪಕ್ಷದ ಧ್ವಜ ಹಿಡಿಯಲು ಹಾಗೂ ಬ್ಯಾನರ್ ಕಟ್ಟಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಆದರೆ, ಬಿಜೆಪಿಯಲ್ಲಿ ಯುವಕರಿಗೆ ವಿಶೇಷ ಸ್ಥಾನಗಳನ್ನು ನೀಡಲಾಗಿದೆ ಎಂದರು.
    ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ, ಮಾಧವ ಗಣಾಚಾರಿ, ಅಶೋಕ ವನ್ನಾಲ, ರವಿ ದಂಡಿನ, ಉಮೇಶ ಮಲ್ಲಾಪುರ, ಬಸವರಾಜ ಬೆಲ್ಲದ, ನಾಗರಾಜ ಕುಲಕರ್ಣಿ, ಉಮೇಶ ಪಾಟೀಲ, ಆರ್.ಕೆ. ಚವ್ಹಾಣ, ಶರಣು ಡೊಳ್ಳಿನ, ಶರಣಪ್ಪ ಡೊಣ್ಣೆಗುಡ್ಡ, ಅಮರೇಶ ಅರಳಿ, ಬದರಿ ಜೋಶಿ, ಉಮೇಶ ಪಾಟೀಲ, ಸಂತೋಷ ವಸ್ತ್ರದ, ಪೃಥ್ವಿರಾಜ ಪಾಟೀಲ, ಶರಣಪ್ಪ ಕಂಬಳಿ, ಉಮೇಶ ಸಂಗನಾಳಮಠ, ಅಕ್ಕಮ್ಮ ಮಣ್ಣೊಡ್ಡರ, ಇಂದಿರಾ ತೇಲಿ, ಲೀಲಾವತಿ ಸವಣೂರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts