More

    ಸರ್ಕಾರದ ಷರತ್ತು, ಕಲಾವಿದರಿಗೆ ಆಪತ್ತು

    ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ

    ಕರೊನಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಹಲವು ನಿಬಂಧನೆಗಳನ್ನು ವಿಧಿಸಿದ್ದು, ಪ್ರಮುಖವಾಗಿ ಮೂರ್ತಿ ತಯಾರಕರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಹಿಂದಿನ ವರ್ಷ ಪಟ್ಟಣ ಸೇರಿ ತಾಲೂಕಿನ 100ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಗಳನ್ನು ಸ್ಥಾಪಿಸಲಾಗುತ್ತಿತ್ತು. ಆದರೆ, ಸರ್ಕಾರದ ಆದೇಶದ ಪ್ರಕಾರ 4 ಅಡಿಗಿಂತ ದೊಡ್ಡ ಗಣಪತಿ ಮೂರ್ತಿ ಇಡುವಂತಿಲ್ಲ. 20 ಜನರು ಮಾತ್ರ ಸ್ಥಳದಲ್ಲಿರಲು ಅವಕಾಶ, ಜಾಂಜ್ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಇದರಿಂದ ಬಹುತೇಕ ಸಂಘ, ಸಂಸ್ಥೆಗಳು ದೊಡ್ಡ ಗಣಪತಿ ಸ್ಥಾಪಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರದ ನಿರ್ದೇಶನ ಪಾಲಿಸಬೇಕಿದ್ದು, ನಮಗೆ 4 ಅಡಿಗಿಂತ ಕಡಿಮೆ ಅಳತೆಯ ಮೂರ್ತಿ ಕೊಡಿ, ಇಲ್ಲವಾದ್ರೆ ಈ ಬಾರಿ ಚಿಕ್ಕ ಗಣಪತಿ ಇಟ್ಟು ವಿಧಿವಿಧಾನ ಮಾಡುತ್ತೇವೆ ಎನ್ನುತ್ತಿರುವುದು ಕಲಾವಿದರಲ್ಲಿ ಆತಂಕ ಹೆಚ್ಚಿಸಿದೆ. ಪಟ್ಟಣದ ಬಣಗಾರ ಕುಟುಂಬದ ಕಲಾವಿದರು, ಕಳೆದ ಬಾರಿ 200 ಮೂರ್ತಿ ತಯಾರಿಸಿದ್ದರು. ಈ ಬಾರಿ ಸಣ್ಣ ಗಣಪತಿ ವಿಗೃಹಕ್ಕೆ ಹೆಚ್ಚಿನ ಬೇಡಿಕೆಯಿದೆ. ಆದರೆ, ದೊಡ್ಡ ಗಣಪತಿಗಳನ್ನು ಒಯ್ಯಲು ಜನ ಮನಸ್ಸು ಮಾಡುತ್ತಿಲ್ಲ. ಸಂಘ, ಸಂಸ್ಥೆಗಳ ಯುವಕರಲ್ಲಿ ಹುಮ್ಮಸ್ಸು ಕಳೆಗಟ್ಟಿದೆ. 20ಕ್ಕೂ ಹೆಚ್ಚು ದೊಡ್ಡ ಮೂರ್ತಿಗಳನ್ನು ತಯಾರಿಸಿದ್ದೇವೆ. ಒಂದು ಮೂರ್ತಿಗೆ 5 ಸಾವಿರ ರೂ. ಲೆಕ್ಕ ಹಾಕಿದರೂ ಕನಿಷ್ಠ 20 ಮೂರ್ತಿಗಳಿಗೆ 1 ಲಕ್ಷ ರೂ. ನಷ್ಟವಾಗುವ ಆತಂಕ ಕಾಡುತ್ತಿದೆ ಎಂದು ಕಲಾವಿದರು ಅಳಲು ತೋಡಿಕೊಂಡಿದ್ದಾರೆ.

    ಅಧಿಕಾರಿಗಳು ಆಗಾಗ ನಮ್ಮ ಮಾರಾಟ ಸ್ಥಳಕ್ಕೆ ಬಂದು ಮೂರ್ತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ನಾವು ಪಿಒಪಿ, ರಾಸಾಯನಿಕ ಬಣ್ಣಗಳ ಲೇಪನ ಮಾಡುತ್ತಿಲ್ಲ. ಆದರೂ ಅಧಿಕಾರಿಗಳು ಆಗಮಿಸುತ್ತಿದ್ದು, ಸರ್ಕಾರದ ನಿಯಮ ಪಾಲಿಸಿ ಎನ್ನುತ್ತಾರೆ. ನಿಯಮ ಪಾಲಿಸುತ್ತೇವೆ. ಆದರೆ, ನಮ್ಮ ನಷ್ಟ ಭರಿಸುವರ್ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ದೊಡ್ಡ ಮೂರ್ತಿ ಮಾರಬೇಡಿ ಎನ್ನುವುದು ನಮಗೆ ನುಂಗಲಾರದ ತುತ್ತಾಗಿದೆ ಎಂದು ಕಲಾವಿದರು ಗೋಳು ತೋಡಿಕೊಂಡಿದ್ದಾರೆ.

    ಸರ್ಕಾರದ ನಿರ್ದೇಶನದಂತೆ ಗಣಪತಿ ಹಬ್ಬ ಆಚರಣೆಗೆ ಪೂರ್ವಭಾವಿ ಸಭೆ ನಡೆಸಿದ್ದು, ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೇವೆ. 4 ಅಡಿಗಿಂತ ದೊಡ್ಡ ಮೂರ್ತಿ ಇಡಬಾರದು, ಸಾರ್ವಜನಿಕ ಸ್ಥಳಗಳಲ್ಲಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚು ಭಕ್ತರು ಇರಬಾರದು. ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಮೂರ್ತಿ ಕಲಾವಿದರ ಸಮಸ್ಯೆ ಗಮನಕ್ಕೆ ಬಂದಿದ್ದು, ಸರ್ಕಾರಕ್ಕೆ ತಲುಪಿಸುವ ಪ್ರಾಮಾಣಿಕ ಯತ್ನ ನಡೆಸುತ್ತೇವೆ.

    | ಶರಣಮ್ಮ ಕಾರಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts