More

    ಸಮ ಸಮಾಜಕ್ಕಾಗಿ ಶ್ರಮಿಸಿದ ಮಹಾರಾಜ

    ಗದಗ: ಸಮ ಸಮಾಜಕ್ಕಾಗಿ ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಶಿವಾಜಿ ಮಹಾರಾಜರು ಶ್ರಮಿಸಿದ್ದು, ಅವರ ಆದರ್ಶ ಸರ್ವರಿಗೂ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಎಂ. ಸತೀಶಕುಮಾರ ಹೇಳಿದರು.

    ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕ್ಷತ್ರೀಯ ಮಹಾಸಭಾ ಸಹಯೋಗದಲ್ಲಿ ಮರಾಠಾ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರು ಇಡೀ ಮಾನವ ಸಮುದಾಯದ ಏಳಿಗೆಗಾಗಿ ನಿಸ್ವಾರ್ಥದಿಂದ ಶ್ರಮಿಸಿದ್ದಾರೆ. ಶಿವಾಜಿಯ ಜೀವನ ಸಂದೇಶಗಳ ಬಗ್ಗೆ ಯುವ ಪೀಳಿಗೆಗೆ ಪರಿಚಯಿಸುವುದಲ್ಲದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ವಿನಾಯಕ ತಲಗೇರಿ ಉಪನ್ಯಾಸ ನೀಡಿ, ಸಮಾಜದ ಕಲ್ಯಾಣಕ್ಕಾಗಿ, ದೇಶದ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಮಹಾರಾಜರು ನಾಡಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಶಿವಾಜಿ ಅವರ ಆಡಳಿತದಲ್ಲಿ ಸರ್ವಧರ್ವಿುಯರು ಅನ್ಯೋನ್ಯವಾಗಿದ್ದರು. ಶೌರ್ಯ, ಧೈರ್ಯಕ್ಕೆ ಹೆಸರುವಾಸಿಯಾಗಿದ್ದ ಅವರಿಗೆ ಬಾಲ್ಯದಲ್ಲಿ ತಾಯಿಯಿಂದ ಒಳ್ಳೆಯ ಸಂಸ್ಕಾರ ಸಿಕ್ಕಿತು. ಉತ್ತಮ ಆಡಳಿತಗಾರರು, ರಾಜನೀತಿತಜ್ಞರು ಆಗಿದ್ದ ಶಿವಾಜಿಯು ಧರ್ಮದ ಬಗ್ಗೆ ಅಭಿಮಾನ ಜತೆಗೆ ಇತರರನ್ನು ಗೌರವಿಸುವ ವಿಶೇಷ ಗುಣ ಹೊಂದಿದ್ದರು ಎಂದು ವಿವರಿಸಿದರು.

    ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿವೈಎಸ್​ಪಿ ಎಸ್.ಕೆ.ಪ್ರಹ್ಲಾದ್, ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರುಣ್​ಕುಮಾರ ಚವ್ಹಾಣ, ಮೋಹನ್​ರಾವ ಗ್ವಾರಿ, ಮೋಹನ್​ರಾವ ಸಾಳುಂಕೆ, ಶ್ರೀಕಾಂತ ಖಟವಟೆ, ಪ್ರಕಾಶ ಬಾಕಳೆ, ಎಂ.ಸಿ. ಶೇಖ್ ಹಾಗೂ ಕ್ಷತ್ರೀಯ ಸಮಾಜದ ಗಣ್ಯರು, ಗುರುಹಿರಿಯರು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸ್ವಾಗತಿಸಿ, ವಂದಿಸಿದರು.

    ಅಪ್ರತಿಮ ದೇಶಪ್ರೇಮಿ

    ನರೇಗಲ್ಲ: ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಕರ ಪ್ರೌಢ ಶಾಲೆಯಲ್ಲಿ ಶಿವಾಜಿ ಜಯಂತಿ ಆಚರಿಸಲಾಯಿತು.

    ಮುಖ್ಯಶಿಕ್ಷಕ ಎಸ್.ಎಚ್. ಅಬ್ಬಿಗೇರಿ ಮಾತನಾಡಿ, ಭಾರತ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ದೇಶ ಪ್ರೇಮ ಪ್ರತಿಯೊಬ್ಬ ಭಾರತೀಯನಿಗೆ ಮಾದರಿಯಾಗಿದೆ. ದೇಶದ ಸ್ವಾತಂತ್ರ್ಯ್ಕಾಗಿ ಹೋರಾಡಿದ ಅಪ್ರತಿಮ ದೇಶಪ್ರೇಮಿಯಾಗಿದ್ದಾರೆ ಎಂದು ಹೇಳಿದರು.

    ಶಿಕ್ಷಕ ಎಂ.ವಿ. ಬಿಂಗಿ, ಎಲ್.ಎನ್. ನಾಯಕ. ಎಂ.ವಿ. ವೀರಾಪೂರ, ಎಸ್.ಬಿ. ಬೂದಿಹಾಳ, ಎಸ್.ಕೆ. ಗಾಣಿಗೇರ, ಇಸ್ಮಾಯಿಲ್ ಆರಿ, ರತ್ನಮ್ಮ ಧಡೇಸೂರಮಠ, ಎ.ಎಂ. ರಾಠೋಡ, ಟಿ.ಬಿ. ಆಡೂರ, ಆರ್.ಎಂ. ಗುಳಬಾಳ, ಆರ್.ಎಂ. ನದಾಫ್ ಇತರರಿದ್ದರು.

    ಅಬ್ಬಿಗೇರಿ ಗ್ರಾ.ಪಂ

    ಸಮೀಪದ ಅಬ್ಬಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಪಂ ಅಧ್ಯಕ್ಷ ಕಳಕಪ್ಪ ಬಿಲ್ಲ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪಾಧ್ಯಕ್ಷೆ ದೇವಕ್ಕ ಮಾರೆಪ್ಪನವರ, ಸದಸ್ಯರಾದ ಸುರೇಶ ನಾಯ್ಕರ, ಬಸವರಾಜ ತಳವಾರ, ಭೀಮಶಿ ಮಲ್ಲಾಪೂರ, ಮಹಾದೇವಪ್ಪ ಕಂಬಳಿ, ಶರಣಪ್ಪ ಗುಜಮಾಗಡಿ, ಸುರೇಶ ಶಿದ್ನೆಕೊಪ್ಪ, ಹನಮಂತಪ್ಪ ದ್ವಾಸಲ್, ಲಕ್ಷ್ಮಣ ಐಹೊಳ್ಳಿ, ಯಲ್ಲಪ್ಪ ಹಿರೇಮನಿ, ಶಾರದಾ ಹಡಪದ, ಮುತ್ತಕ್ಕ ನಿಡಗುಂದಿ, ಸಕ್ರಮ್ಮ ನೀರಲೋಟಿ, ಮಮತಾಜಬೇಗಂ ಹುಡೇದ, ಸರೋಜಾ ಕಲ್ಲೇಶ್ಯಾಣಿ, ಪಿಡಿಒ ಶಿವನಗೌಡ ಮೆಣಸಗಿ, ವೀರಪ್ಪ ಮ್ಯಾಗೇರಿ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.

    ಸಾಂಕೇತಿಕವಾಗಿ ಜಯಂತಿ ಆಚರಣೆ

    ಮುಂಡರಗಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಾಂಕೇತಿವಾಗಿ ಆಚರಿಸಲಾಯಿತು. ತಾಲೂಕು ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಕೃಷ್ಣ ಆರೇರ, ಭೀಮರಾವ್ ಆರೇರ, ಪವನ ಲೇಡ್ವೆ, ಸುರೇಶ ಜಾಧವ, ಎಸ್.ಎಸ್. ಬಿಚ್ಚಾಲಿ, ಸಿ.ಕೆ. ಬಳವಟಗಿ, ಆರ್.ಆರ್. ಡೊಂಬರ, ಎಂ.ಎ. ನದಾಫ್, ಪ್ರಕಾಶ ಇನಾಮದಾರ, ಐ.ಎಸ್. ದೊಡ್ಡಮನಿ, ಗೌರಮ್ಮ ಚೌಡಕಿ, ಅನುಪಮ ಕೆ.ಸಿ., ಶಾಂತಮ್ಮ ಮಠಪತಿ, ಪಿ.ಎಸ್. ಪಾಟೀಲ, ಡಿ.ಎ. ಕರೇಮನಿ, ಮಂಜುನಾಥ ಮಂಡಾಗಣಿ, ಎಸ್.ವಿ. ವಾಯಿ, ಇತರರಿದ್ದರು.

    ಆದರ್ಶ ಪಾಲಿಸಿ

    ಮುಳಗುಂದ: ಪಟ್ಟಣ ಪಂಚಾಯಿತಿಯಲ್ಲಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು.

    ಪಪಂ ಸದಸ್ಯ ಕೆ.ಎಲ್. ಕರಿಗೌಡರ ಮಾತನಾಡಿ, ಶಿವಾಜಿ ಮಹಾರಾಜರು ಒಂದು ಜಾತಿ, ಜನಾಂಗಕ್ಕೆ ಸೀಮಿತರಲ್ಲ. ಅವರೊಬ್ಬ ಆದರ್ಶ ವ್ಯಕ್ತಿ ಎಂದರು. ಕ್ಷತ್ರೀಯ ಸಮಾಜದ ವೈ. ಕೆ. ಶಿರಹಟ್ಟಿ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ, ಮುದಕಪ್ಪ ಬಡಿಗೇರ, ಬಿ.ಎಲ್. ಜಾಧವ. ಮಂಜುನಾಥ ಆರೇರ, ಬಸವರಾಜ ದುರಗಾರ, ಚನ್ನಪ್ಪ ನಿಂಗೋಜಿ, ಪ್ರಕಾಶ ಜಾಧವ, ಆನಂದ ಜಾಧವ, ಗಣೇಶ ಅರಳಿಕಟ್ಟಿ, ರಾಮಣ್ಣ ಆರೇರ, ಗೀತಾ ಜಾಧವ, ರೇಣುಕಾ ಜಾಧವ, ಮಲ್ಲಮ್ಮ ನಿಂಗೋಜಿ, ಲಕ್ಷ್ಮಮ್ಮ ನಿಂಗೋಜಿ, ಗೀತಾ ಕಳ್ಳಿಮನಿ, ಗೀತಾ ಟೆಂಕಪ್ಪನವರ, ಸುನಂದಬಾಯಿ ನವಲೆ, ಲಕ್ಷ್ಮಿ ಆರೇರ, ಪಾರವ್ವ ಅಳ್ಳಣ್ಣವರ, ಬಸವರಾಜ ಹಾರೋಗೇರಿ, ಎಸ್.ಸಿ.ಬಡ್ನಿ, ನಾಗರಾಜ ದೇಶಪಾಂಡೆ ಇದ್ದರು.

    ಶೌರ್ಯ, ರಾಷ್ಟ್ರಭಕ್ತಿ ಎಂದೆಂದಿಗೂ ಪ್ರೇರಣಾದಾಯಿ

    ಗಜೇಂದ್ರಗಡ: ಛತ್ರಪತಿ ಶಿವಾಜಿ ಮಹಾರಾಜರು ಅಪ್ಪಟ ದೇಶಭಕ್ತರು ಎಂದು ಪಿಎಸ್​ಐ ಗುರುಶಾಂತ ದಾಶ್ಯಾಳ ಹೇಳಿದರು.

    ಪಟ್ಟಣದ ಶಿವಾಜಿ ಪೇಟೆಯ ಛತ್ರಪತಿ ಶಿವಾಜಿ ಸಮುದಾಯ ಭವನದಲ್ಲಿ ಮಾರುತೇಶ್ಚರ ತರುಣ ಸಂಘ, ಕ್ಷತ್ರೀಯ ಮರಾಠಾ ಸಮಾಜ, ಮಾರುತೇಶ್ವರ ಜೀಣೋದ್ಧಾರ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪರದೇಶಿಗಳ ಆಳ್ವಿಕೆಯಿಂದ ನಲುಗಿಹೋಗಿದ್ದ ಹಿಂದುಸ್ತಾನವನ್ನು ಒಗ್ಗೂಡಿಸುವ ಮಹತ್ವದ ನಿರ್ಧಾರಕ್ಕೆ ಬಂದ ಶಿವಾಜಿ ಮೊದಲಿಗೆ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದರು. ಶಿವಾಜಿಯ ಶೌರ್ಯ, ರಾಷ್ಟ್ರಭಕ್ತಿ ಎಂದೆಂದಿಗೂ ಪ್ರೇರಣಾದಾಯಿ ಎಂದರು.

    ಪುರಸಭೆ ಮಾಜಿ ಸದಸ್ಯ ರಾಜೇಂದ್ರ ಘೊರ್ಪಡೆ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುವುದರ ಜತೆಗೆ ಶಿವಾಜಿ ಮಹಾರಾಜರ ತತ್ತಾ್ವದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮಹತ್ತರ ಕೆಲಸ ನಮ್ಮೆಲ್ಲರದ್ದಾಗಿದೆ ಎಂದರು.

    ಉಪನ್ಯಾಸಕ ರಮೇಶ ಮರಾಠಿ, ಮಾಜಿ ಸೈನಿಕ ಎಸ್.ಆರ್. ರಾಮಜಿ ಹಾಗೂ ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ ಮಾತನಾಡಿದರು. ಯಶ್​ರಾಜ ಘೊರ್ಪಡೆ ನೇತೃತ್ವ ವಹಿಸಿದ್ದರು. ಬಲರಾಮಗಿರಿ ಶಂಕರಗಿರಿ ಗೋಸಾವಿಮಠ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಅಧ್ಯಕ್ಷ ರೇಣುಕಪ್ಪ ಇಂಗಳೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಯಮನೂರ ತಿರಕೋಜಿ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಮಂಗಲಾದೇವಿ ದೇಶಮುಖ, ಬಾಳು ಪವಾರ, ಶ್ರೀಕಾಂತ ಅವಧೂತ, ಕೃಷ್ಣಾಜಿರಾವ್ ಸೂರ್ಯವಂಶಿ, ಡಿ.ಕೆ. ಚಾವಣಿ, ರಾಮಣ್ಣ ಮಾಲಗಿತ್ತಿ, ಜಗದೀಶ ಕಲ್ಗುಡಿ, ಡಾ.ಪಿ.ಬಿ. ರಾಮಜಿ, ಮಾರುತಿ ಚಿಟಗಿ, ಪರಸಪ್ಪ ಪುಜಾರ, ಪರಶುರಾಮ ಕರಾಡೆ, ದಾದಪ್ಪ ಮಾಲಗಿತ್ತಿ, ರವಿ ಶಿಂಗ್ರಿ, ಭೀಮಪ್ಪ ಹಾಳಕೇರಿ, ಲಕ್ಷ್ಮಣ ಬಡಿಗೇರ, ಮಾರುತಿ ನಿಂಬೋಜಿ, ಭೀಮಣ್ಣ ಇಂಗಳೆ ಇತರರು ಇದ್ದರು. ಕಾರ್ಯಕ್ರಮದ ಬಳಿಕ ಯುವಕರ ಬೈಕ್ ರ‍್ಯಾಲಿ ನಡೆಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts