More

    ಸಮ್ಮೇಳನ ಯಶಸ್ಸಿಗೆ ಶ್ರಮಿಸಿ

    ವಿಜಯಪುರ: ನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ 37ನೇ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಂಘದ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಹೇಳಿದರು.

    ನಗರದ ವನಶ್ರೀ ಸಂಸ್ಥಾನ ಮಠದ ಸಭಾಭವನದಲ್ಲಿ ಭಾನುವಾರ ನಡೆದ ಸಮ್ಮೇಳನದ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಂಘದ ಎಲ್ಲ ಸದಸ್ಯರು ಸಮ್ಮೇಳನದ ಭಾಗವಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಸಹಕರಿಸಬೇಕು. ಸಮ್ಮೇಳನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸುತ್ತಾರೆ. ಹೊರರಾಜ್ಯ, ಹೊರದೇಶಗಳಿಂದಲೂ ಪತ್ರಕರ್ತರನ್ನು ಆಹ್ವಾನಿಸಲಾಗುತ್ತಿದೆ. ಅತಿಥಿಗಳಿಗೆ, ಪತ್ರಕರ್ತರಿಗೆ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದರು.

    ಹಿಂದಿನ ಮೂರು ವರ್ಷಗಳಲ್ಲಿ ಮೂರು ಸಮ್ಮೇಳನಗಳು ಯಶಸ್ವಿಗಾಗಿ ನಡೆದಿವೆ. ವಿಜಯಪುರ ಸಮ್ಮೇಳನವೂ ಒಂದು ಮಾದರಿ ಸಮ್ಮೇಳನವಾಗಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲೇ ಈ ಸಮ್ಮೇಳನ ನಡೆಸಲಾಗುವುದು. ಸಮ್ಮೇಳನದಲ್ಲಿ ಜಿಲ್ಲಾಮಟ್ಟದ ಪತ್ರಿಕೆಗಳು, ರಾಜ್ಯಮಟ್ಟದ ಪತ್ರಿಕೆಗಳು ಹಾಗೂ ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಎದುರಿಸುವ ಸಮಸ್ಯೆಗಳ ಕುರಿತು ವಿವಿಧ ಗೋಷ್ಠಿಗಳು, ಮಹಿಳೆಯರಿಗಾಗಿ ಒಂದು ಪ್ರತ್ಯೇಕ ಮಹಿಳಾ ಗೋಷ್ಠಿ, ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎರಡು ದಿನಗಳ ಸಮ್ಮೇಳನ ಇದಾಗಿದೆ ಎಂದರು.

    ಮೊದಲ ದಿನ ಮುಖ್ಯಮಂತ್ರಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಮರುದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಲಾಗುವುದು. ಸಮ್ಮೇಳನ ಸಂದರ್ಭದಲ್ಲೇ ಸಂಘದ ಸಾಮಾನ್ಯ ಸಭೆ ನಡೆಸಲಾಗುತ್ತದೆ. ಹಿಂದಿನ ಮೂರು ಸಮ್ಮೇಳನದ ರೂಪುರೇಷೆಗಳು ಒಳಗೊಂಡಂತೆ ಸಮ್ಮೇಳನದ ಯಶಸ್ಸಿಗೆ ಯೋಜನೆ ರೂಪಿಸಲಾಗುವುದು ಎಂದರು.

    ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ಸಮ್ಮೇಳನ ನಡೆಸಲು ಬೇರೆ- ಬೇರೆ ಜಿಲ್ಲೆಯವರು ಬೇಡಿಕೆ ಇಟ್ಟಿದ್ದರು. ಈ ಬಾರಿಯೂ ಉತ್ತರ ಕರ್ನಾಟಕಕ್ಕೆ ಪ್ರಾಧಾನ್ಯ ನೀಡಲಾಗಿದೆ. ನಾಡಿನ ವಿವಿಧೆಡೆಯಿಂದ ಆಗಮಿಸುವ ಪ್ರತಿನಿಧಿಗಳಿಗೆ ಉತ್ತಮ ಆತಿಥ್ಯ ನೀಡಬೇಕು ಎಂದರು.

    ಕೆಯುಡಬ್ಲೂೃಜೆ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿ, ಪತ್ರಕರ್ತರ ಸಮ್ಮೇಳನ ಈ ಹಿಂದೆ ದಕ್ಷಿಣ ಭಾಗದ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು.

    ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಎ್ಡಬ್ಲೂೃಜೆ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ, ಕಾನಿಪ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಕೆ.ಕುಲಕರ್ಣಿ, ಡಿ.ಬಿ.ವಡವಡಗಿ, ಕೌಶಲ್ಯಾ ಪನ್ನಾಳಕರ, ಮೋಹನ ಕುಲಕರ್ಣಿ, ಪ್ರಕಾಶ ಬೆಣ್ಣೂರ, ಅವಿನಾಶ ಬಿದರಿ, ಮಲ್ಲಿಕಾರ್ಜುನ ಕೆಂಭಾವಿ, ಶಕೀಲ ಬಾಗಮಾರೆ, ರಾಹುಲ ಆಪ್ಟೆ, ಇಂದುಶೇಖರ ಮಣೂರ, ಜಿ.ಎಸ್.ಕಮತರ, ರುದ್ರಪ್ಪ ಆಸಂಗಿ, ಸಚೇಂದ್ರ ಲಂಬು, ದೇವೇಂದ್ರ ಹೆಳವರ, ರಾಜು ಕೊಂಡಗೂಳಿ, ಸುಶೀಲೇಂದ್ರ ನಾಯಿಕ, ಜಿ.ಸಿ.ಮುತ್ತಲದಿನ್ನಿ, ಟಿ.ಕೆ.ಮಲಗೊಂಡ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts