More

    ಸಮ್ಮಿಶ್ರ ಬೆಳೆ ಪದ್ಧತಿಯಿಂದ ಹೆಚ್ಚು ಲಾಭ

    ಬ್ಯಾಡಗಿ: ರೈತರು ಮೆಕ್ಕೆಜೋಳದೊಂದಿಗೆ ರಾಗಿ, ನವಣೆ, ಸಜ್ಜೆ, ಹಾಗೂ ತೊಗರಿ ಸೇರಿ ಏಕದಳ ಧಾನ್ಯಗಳನ್ನು ಬಿತ್ತನೆ ಮಾಡಿದಲ್ಲಿ ಬೆಳೆ ನಷ್ಟ ತಪ್ಪಿಸಲು ಸಾಧ್ಯವಾಗಲಿದೆ. ಸಮ್ಮಿಶ್ರ ಬೆಳೆ ಪದ್ಧತಿಯಿಂದ ಹೆಚ್ಚು ಲಾಭ ಪಡೆಯಬಹುದು ಎಂದು ಕೃಷಿ ಸಹಾಯಕ ಅಧಿಕಾರಿ ಕೆ.ಬಿ. ಹಿರೇಹಾಳ ಹೇಳಿದರು.

    ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಬೀಜ ವಿತರಣೆ ಉಪಕೇಂದ್ರ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಹೊಸ ಬೆಳೆ ಪದ್ಧತಿಯತ್ತ ಕೃಷಿಕರು ಮುಖ ಮಾಡಬೇಕು. ರೈತ ಸಮುದಾಯ ಕೇವಲ ರಾಸಾಯನಿಕ ಗೊಬ್ಬರದ ಮೇಲೆ ಅವಲಂಬಿತರಾಗದೆ, ಸಾವಯುವ, ತಿಪ್ಪೆ ಗೊಬ್ಬರ, ಡಿ. ಕಾಂಪೋಸ್ಟ್ ಇತ್ಯಾದಿ ಗೊಬ್ಬರಗಳನ್ನು ಬೆಳೆಗಳಿಗೆ ಬಳಸಬೇಕು ಎಂದರು.

    ಸರ್ಕಾರದ ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಕೇಂದ್ರದಲ್ಲಿ ವಿತರಿಸಲಾಗುತ್ತಿದೆ. ರೈತರು ದಾಖಲೆಗಳನ್ನು ಸಲ್ಲಿಸುವ ಮೂಲಕ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದರು.

    ಎಪಿಎಂಸಿ ಸದಸ್ಯ ವೀರಭದ್ರಪ್ಪ ಗೊಡಚಿ ಮಾತನಾಡಿ, ಕರೊನಾ ವೈರಸ್ ರೋಗದ ಭೀತಿಯಿಂದ ರೈತರು ಧೃತಿಗೆಡುವ ಅಗತ್ಯವಿಲ್ಲ. ಕೃಷಿ ಚಟುವಟಿಕೆಗೆ ರೈತರಿಗೆ ತೊಂದರೆಯಾಗದಂತೆ ಸರ್ಕಾರ ಬಿತ್ತನೆ ಬೀಜ, ಗೊಬ್ಬರ, ಪರಿಕರ ಪೂರೈಸುತ್ತಿದೆ. ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ತೊಂದರೆಯಾಗಲ್ಲ. ಸ್ಥಳೀಯ ಶಾಸಕರು ಕೃಷಿ ಇಲಾಖೆ ಅಧಿಕಾರಿಗಳ ಸಭೆ ನಡೆಸುವ ಮೂಲಕ ರೈತರ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದಾರೆ. ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಕೆರೆ ಕಟ್ಟೆಗಳಲ್ಲಿ ಸಂಗ್ರಹಿಸಿಕೊಂಡು, ಅಂತರ್ಜಲ ಕಾಪಾಡಬೇಕಿದೆ. ಸರ್ಕಾರದ ಎಲ್ಲ ಯೋಜನೆ ಬಳಸಿಕೊಂಡು ರೈತರು ಅಭಿವೃದ್ಧಿಯಾಗಬೇಕು ಎಂದರು.

    ತಾ.ಪಂ. ಸದಸ್ಯ ಶಾಂತಪ್ಪ ದೊಡ್ಡಮನಿ, ಗ್ರಾ.ಪಂ. ಸದಸ್ಯರಾದ ಮಲ್ಲಿಕಾರ್ಜುನಗೌಡ್ರ ಚನ್ನಗೌಡ್ರ, ಜಗದೀಶ ಕಣಗಿಲಬಾವಿ, ಸುಭಾಸ ಪಂಚಾನನ, ರೈತಅನುವುಗಾರ ಮೂರ್ತಿ ಮುಳಥಳ್ಳಿ, ಶಾಂತಪ್ಪ ಹರಿಜನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts