More

    ಸಮುದಾಯ ಸಂಘಟಿಸಲು ಶ್ರಮಿಸಿ

    ಬೈಲಹೊಂಗಲ, ಬೆಳಗಾವಿ: ಕ್ಷತ್ರಿಯ ಎಲ್ಲ 36 ಒಳ ಪಂಗಡಗಳನ್ನು ಒಗ್ಗೂಡಿಸಿ ಸಮುದಾಯ ಸಂಘಟಿಸಲು ಎಲ್ಲರೂ ಶ್ರಮಿಸಬೇಕೆಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಸಂಚಾಲಕ ತಾರಾಸಿಂಗ್ ರಜಪೂತ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್ನ್‌ಲ್ಲಿ ತಾಲೂಕಿನ ಹಿಂದು ಕ್ಷತ್ರಿಯ ಸಮುದಾಯದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಕಟ್ಟಿ ಪ್ರಜೆಗಳ ರಕ್ಷಣೆ ಮಾಡಿದ ಇಂದು ಅನೇಕ ಕಾರಣಗಳಿಂದ ಒಗ್ಗಟ್ಟಿಲ್ಲದೆ ಛಿಧ್ರಗೊಂಡಿದೆ. ಎಲ್ಲರೂ ಒಗ್ಗೂಡಿ ಬಲಿಷ್ಠ ಸಮಾಜ ನಿರ್ಮಿಸೋಣ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ತಾಲೂಕಾಧ್ಯಕ್ಷ ಮಹಾದೇವಸಿಂಗ್ ರಜಪೂತ ಮಾತನಾಡಿ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸೇರಿ ಸರ್ಕಾರದ ಸವಲತ್ತು ಪಡೆಯಲು ವಂಚಿತರಾಗಿದ್ದೇವೆ. ಎಲ್ಲರೂ ಒಗ್ಗೂಡಿ ಬಲಿಷ್ಠ ಸಮುದಾಯ ನಿರ್ಮಿಸಿ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

    ಹಿರಿಯ ಸಾಹಿತಿ ಅನ್ನಪೂರ್ಣಾ ರಜಪೂತ, ಗೋಪಾಲಸಿಂಗ್ ರಜಪೂತ, ರಾಧಾಶ್ಯಾಮ ಕಾದ್ರೋಳ್ಳಿ, ಗೊರವನಕೊಳ್ಳ ದೇಸಾಯಿ, ಸವದತ್ತಿಯ ಗಂಗಾರಾಮಸಿಂಗ್ ರಜಪೂತ, ಬಸವರಾಜ ಬಡಿಗೇರ, ವಿಶಾಲಸಿಂಗ್ ರಜಪೂತ, ನವೀನ ಬಡ್ಲಿ, ಮನೋಹರ ಬೊಂಗಾಳೆ, ಸುಹಾಸ ಬೊಂಗಾಳೆ, ಗ್ರಾಪಂ ಸದಸ್ಯ ಬಾಬುಸಿಂಗ್ ರಜಪೂತ, ಶಿವಾಜಿಗೌಡ ಪಾಟೀಲ, ರತನಸಿಂಗ್ ರಜಪೂತ, ಎಂ.ಎಸ್. ಜಂಬಗಿ, ಸುಭಾಷ ಹಲಗತ್ತಿ, ರೇಖಾ ಚಿನ್ನಾಕಟ್ಟಿ, ಹೊಸೂರ ಗ್ರಾಪಂ ಸದಸ್ಯರಾದ ಸಂಜೀವಗೌಡ ಪಾಟೀಲ, ದೀಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts