More

    ಸಮಾನತೆ ಪ್ರತಿಪಾದಿಸಿದವರು ಸರ್ವಜ್ಞ

    ಬೆಳಗಾವಿ: ತ್ರಿಪದಿ ಕವಿ ಸರ್ವಜ್ಞ ಅವರು ಅಂದಿನ ಕಾಲದಲ್ಲಿ ಯಾವುದೇ ವಿಷಯಕ್ಕೆ ರಾಜಿಯಾಗದೆ ವಚನ ಮತ್ತು ವಿಚಾರಗಳನ್ನು ಸಾಹಿತ್ಯದ ಮೂಲಕ ಸತ್ಯ ಮತ್ತು ನಿಷ್ಠುರತನದಿಂದ ಸಮಾಜಕ್ಕೆ ತಿಳಿಸಿದವರು. ಅಲ್ಲದೆ, ಸಮಾನತೆ ಪ್ರತಿಪಾದಿಸುವ ಮೂಲಕ ಎಲ್ಲರ ಗಮನಸೆಳೆದರು ಎಂದು ಡಾ.ಎಚ್.ಬಿ. ಕೋಲಕಾರ ಹೇಳಿದರು. ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸೋಮವಾರ ಹಮ್ಮಿಕೊಂಡಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಕುಲ, ಜಾತಿ, ಧರ್ಮ ಹೀಗೆ ಸಮಾಜದಲ್ಲಿನ ಕೆಲವು ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು. ಮಹಾನಗರ ಪಾಲಿಕೆಯ ಉಪಮೇಯರ್ ರೇಷ್ಮಾ ಪಾಟೀಲ, ಸಮಾಜದ ಅಧ್ಯಕ್ಷ ಬಿ.ಜಿ. ಕುಂಬಾರ, ಮಹಿಳಾ ಅಧ್ಯಕ್ಷೆ ಮೇಘಾ ಕುಂದರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ನಿಂಗಪ್ಪ ಕುಂಬಾರ, ಸಂಘಟನಾ ಅಧ್ಯಕ್ಷ ಸುರೇಶ ವಡ್ಡರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts