More

    ಸಮಾಜ ಸುಧಾರಣೆಗೆ ಬುನಾದಿ ಹಾಕಿಕೊಟ್ಟವರು ಬಸವಣ್ಣ:ಬಾ.ನಂ. ಲೋಕೇಶ್

    ಹಾಸನ: ಕನಕದಾಸರು, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಬಸವಣ್ಣನವರು ಕೂಡ ಸಮಾಜ ಸುಧಾರಕರಿಗೆ ಬುನಾದಿ ಹಾಕಿಕೊಟ್ಟವರು ಎಂದು ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನಾಡಶ್ರೀ ಬಾ.ನಂ. ಲೋಕೇಶ್ ತಿಳಿಸಿದರು.
    ನಗರದ ಶ್ರೀ ಜವೇನಹಳ್ಳಿ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಬಸವ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಚನ ಗೀತ ಗಾಯನ, ವಚನ ನೃತ್ಯ ವೈಭವ, ಕವಿಗೋಷ್ಠಿ, ವಿಚಾರಗೋಷ್ಠಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದಲ್ಲಿ ಸರ್ವರನು ಸಮವಾಗಿ ನೋಡುವಂತಹ ದೃಷ್ಠಿಯನ್ನು ಇಡೀ ಸಮಾಜಕ್ಕೆ ತಿಳಿಸಿಕೊಟ್ಟರು. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹರಿಕಾರರು. ಬಸವಣ್ಣನವರನ್ನು ಕ್ರಾಂತಿಕಾರರು ಎಂದು ಕರೆಯುತ್ತಾರೆ ಎಂದು ಹೇಳಿದರು.
    ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಬದಲಾವಣೆಯ ಕ್ರಾಂತಿ ಮಾಡಿದರು. ಸಮಾಜದ ಎಲ್ಲಾ ವರ್ಗದಲ್ಲಿಯೂ ಸಮಾನತೆಯನ್ನು ಸಾರಿದ ಮೂಲಕ ಮಹಾನ್ ದಾರ್ಶನಿಕ ಅವರ ದಾನ, ದಾಸೋಹ ಹಾಗೂ ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು ತಿಳಿಸಿದರು.
    ಕಾರ್ಯಕ್ರಮದದಲ್ಲಿ ದಿವ್ಯಸಾನಿಧ್ಯ ವಹಿಸಿದ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಆಶೀರ್ವಚನೆ ನುಡಿದರು. ಇದೆ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಆರ್.ಅರಸು ಅವರಿಗೆ ಬಸವಶ್ರೀ ರಾಷ್ಟ್ರ ಪ್ರಶಸ್ತಿ ಪ್ರಧಾನ ಮಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ವಚನ ನೃತ್ಯ ವೈಭವದಲ್ಲಿ ಎಸ್. ಮೈತ್ರಿ, ದಿವ್ಯಶ್ರೀ, ಮನ್ವಿತಾಮೂರ್ತಿ, ಇಂಪು, ದಿಲೀಪ್, ಛಾಯ, ದೀಕ್ಷಾ ಭಾಗವಹಿಸಿದ್ದರು. ಬೋರೇಗೌಡ, ರೇಣುಕಾ ದಿವಾಕರ್ ಕವಿಗೋಷ್ಠಿ ನಡೆಸಿಕೊಟ್ಟರು. ಸಾಹಿತಿಗಳು ವಚನ ಪಟಿಸಿದರು.
    ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಬಸವ ಕೇಂದ್ರದ ಯು.ಎಸ್.ಬಸವರಾಜು, ಕೌಸ್ತಭ ಪ್ರಕಾಶನ ಸಂಪಾದಕ ಚುಟುಕು ಸಿರಿ ಡಾ. ರತ್ನ ಹಾಲಪ್ಪಗೌಡ, ಅರಕಲಗೂಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುಂದರೇಶ್ ಉಡುವಾರೆ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಪ್ರೇಮ ಮಂಜುನಾಥ್, ಸಮಾಜ ಸೇವಕಿ ಕಾಂಚಾನ ಮಾಲಾ, ಅಖಿಲ ಭಾರತ ವೀರಶೈವ ಮಹಾಮಂಡಲದ ಯುವ ಘಟಕದ ಅಧ್ಯಕ್ಷ ಅವಿನಾಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭ ಮಹೇಶ್, ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್, ಧನ್ಯಕುಮಾರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts