More

    ಸಮಾಜ ಸಂಘಟನೆಯಾದರೆ ಸರ್ಕಾರದ ಸೌಲಭ್ಯ

    ಹುಬ್ಬಳ್ಳಿ: ಹಳೇಹುಬ್ಬಳ್ಳಿ ಬೆಳಮಕರ ಓಣಿಯ ಕುರುಹಿನಶೆಟ್ಟಿ (ನೇಕಾರ) ಸಮಾಜದ ಆಶ್ರಯದಲ್ಲಿ ಜಗದ್ಗುರು ಶ್ರೀ ವೀರಭಿಕ್ಷಾವರ್ತಿ ನೀಲಕಂಠಮಠದಲ್ಲಿ ಶನಿವಾರ ಸಂಜೆ ಲಕ್ಷ ದೀಪೋತ್ಸವ ಸಂಭ್ರಮದಿಂದ ನಡೆಯಿತು.

    ಜಗದ್ಗುರು ಶಂಕರ ಶಿವಾಚಾರ್ಯರ ಶತಮಾನೋತ್ಸವ ಭವನ ನಿರ್ವಣದ ಸಹಾಯಾರ್ಥವಾಗಿ ಆಯೋಜಿಸಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಸಂಘಟನೆಗೊಂಡ ಸಮಾಜಕ್ಕೆ ಮಾತ್ರ ಸರ್ಕಾರದ ಸೌಲಭ್ಯ ಹಾಗೂ ಅನುದಾನ ದೊರೆಯುತ್ತವೆ. ಈ ಕುರಿತು ಕುರುಹಿನಶೆಟ್ಟಿ ಸಮಾಜ ಬಾಂಧವರು ಸಂಘಟನೆ ಮತ್ತು ಒಗ್ಗಟ್ಟಿಗೆ ಮಹತ್ವ ಕೊಡಬೇಕು ಎಂದರು.

    ರಾಜ್ಯದ ಹಲವು ಮಠಗಳಿಗೆ ವಿಶೇಷ ಅನುದಾನ ನೀಡಿರುವ ಸರ್ಕಾರಗಳು ಕುರುಹಿನಶೆಟ್ಟಿ ಸಮಾಜದ ಜಗದ್ಗುರುಗಳು ಮನವಿ ಸಲ್ಲಿಸಿದರೂ ಗಮನ ಹರಿಸಿಲ್ಲ. ಈ ಬಾರಿ ಬಜೆಟ್​ನಲ್ಲಿ ಸಮಾಜದ ಮಠದ ಅಭಿವೃದ್ಧಿಗೆ 5 ಕೋಟಿ ರೂ. ವಿಶೇಷ ಅನುದಾನ ನೀಡದಿದ್ದಲ್ಲಿ ಸ್ವತಃ ನಾವೇ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಶಾಸಕ ಪ್ರಸಾದ ಅಬ್ಬಯ್ಯ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಮಠಕ್ಕೆ ಸರ್ಕಾರದ ಅನುದಾನ ತರುವ ಪ್ರಯತ್ನಕ್ಕೆ ನಿರಂತರ ಪ್ರಯತ್ನ ಮಾಡಲಾಗುವುದು ಎಂದರು.

    ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮೋಹನ ಮಾತನಾಡಿ, ಸಂಘಟನೆಯ ಅವಶ್ಯಕತೆ ತಿಳಿಸಿದರು. ವೀರ ಭಿಕ್ಷಾವರ್ತಿ ನೀಲಕಂಠ ಮಠದ ಕಾರ್ಯಾಧ್ಯಕ್ಷ ಸಿದ್ದಪ್ಪ ಡಂಬಳ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಬಿ. ಈಶ್ವರಪ್ಪ, ನಿವೃತ್ತ ನ್ಯಾಯಮೂರ್ತಿ ವಿದ್ಯಾಧರ ಹಟ್ಟಿ, ಪ್ರಮುಖರಾದ ಸೋಮಶೇಖರ, ಅಂಬಾದಾಸ್, ಮಲ್ಲಪ್ಪ ಕುಚನೂರ, ಎಂ. ರವೀಂದ್ರ, ಪ್ರಭಾವತಿ ಚಾವಡಿ, ಲಕ್ಷ ದೀಪೋತ್ಸವ ಸಮಿತಿ ಪದಾಧಿಕಾರಿಗಳು, ಯುವಕ ಸಂಘದ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕುರಹಿನಶೆಟ್ಟಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಡಾ. ಅಮರೇಶ್ವರ ನೀಲಕಂಠಮಠ, ಸೋಮಣ್ಣ ಬುರಡಿ ಹಾಗೂ ಆನಂದ ಮತ್ತಿಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts