More

    ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಜ.2ರಿಂದ 

    ದಾವಣಗೆರೆ: ಕರ್ನಾಟಕ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನಾಂದೋಲನಗಳ ಮಹಾಮೈತ್ರಿ ಕರ್ನಾಟಕ ನೇತೃತ್ವದಲ್ಲಿ ಜ.2ರಿಂದ 11ರ ವರೆಗೆ ಆಜಾದಿ ಸೇ ಸ್ವರಾಜ್ ರಾಷ್ಟ್ರಮಟ್ಟದ ಅಭಿಯಾನದ ಅಂಗವಾಗಿ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ನಡೆಯಲಿದೆ.

    ಸಿಟಿಜನ್ ಫಾರ್ ಡೆಮಾಕ್ರಸಿ ಹಾಗೂ ಜನತಂತ್ರ ಪ್ರಯೋಗ ಶಾಲೆ ಸಹಯೋಗದಲ್ಲಿ ವಿವಿಧ ಭಾಗಗಳಿಂದ ನಾಲ್ಕು ಹಂತಗಳಲ್ಲಿ ಈ ಯಾತ್ರೆ ನಡೆಯಲಿವೆ ಎಂದು ರಾಜ್ಯ ರೈತ ಸಂಘದ ಮುಖಂಡ ಜೆ.ಎಂ. ವೀರಸಂಗಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ರೈತಕೂಲಿಕಾರ ಕೇಂದ್ರಿತ ಪ್ರಧಾನ ಜಾಥಾ ಜನವರಿ 2ರಿಂದ ಕೂಡಲಸಂಗಮದಿಂದ ಹೊರಟು ಜ.8ಕ್ಕೆ ದಾವಣಗೆರೆಗೆ ಆಗಮಿಸಲಿದೆ. ಕುಸನೂರಿನಿಂದ ಹೊರಡುವ ಸಾಮೂಹಿಕ ಭೂಮಿ ಸಂರಕ್ಷಣಾ ಕೇಂದ್ರಿತ ಜಾಥಾ ಜ.7ಕ್ಕೆ ಆರಂಭವಾಗಿ 9ಕ್ಕೆ ದಾವಣಗೆರೆ ಪ್ರವೇಶಿಸಲಿದೆ ಎಂದು ವಿವರಿಸಿದರು.
    ಮಂಗಳೂರಿನಿಂದ ಹೊರಡುವ ಕೋಮು ಸೌಹಾರ್ದ ಕೇಂದ್ರಿತ ಭಾವೈಕ್ಯ ಜಾಥಾ ಹಾಗೂ ಕೋಲಾರದಿಂದ ಹೊರಡುವ ಸಂವಿಧಾನ ರಕ್ಷಣೆ ಕೇಂದ್ರಿತ ಜಾಥಾ ಎಲ್ಲಾ ಜಾಥಾಗಳು 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಳ್ಳಲಿವೆ ಎಂದರು.
    ಭೂಸುಧಾರಣೆ ಕಾಯ್ದೆಯಿಂದಾಗಿ ರೈತರ ಕೃಷಿ ಭೂಮಿ ನೋಂದಣಿ ಜಾಸ್ತಿಯಾಗಿದ್ದು, ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದಾಗಿ ಹೈನುಗಾರಿಕೆ ತೊಂದರೆಯಾಗಿದೆ. ವಿದ್ಯುತ್ ಖಾಸಗೀಕರಣ 1.65 ಲಕ್ಷ ಭಾಗ್ಯಜ್ಯೋತಿ ಕುಟೀರ ಜ್ಯೋತಿ ಯೋಜನೆ ರದ್ದಾಗಲಿವೆ ಎಂದು ಹೇಳಿದರು.
    ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಸಿದ ನಂತರ ರೈತರಿಗೆ ಪರಿಹಾರ ನೀಡುವಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ ಸತಾಯಿಸುತ್ತಿರುವುದನ್ನು ಖಂಡಿಸಿ ಜ.9ರಂದು ರೈತಭವನದಲ್ಲಿ ನಡೆಯಬೇಕಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹೇಳಿದರು.
    ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಕಬ್ಬಿನ ಉಪ ಉತ್ಪನ್ನ ಎಥೆನಾಲ್ ಅನ್ನು ಪರಿಗಣಿಸಲಿದೆ ಎಂದು ಸರ್ಕಾರ ಹೇಳಿದೆ. ಆದರೆ ಇದು ಜಾರಿಯಾಗಿಲ್ಲ. ಕರ್ನಾಟಕದ ಅರ್ಧ ಭಾಗದ ಜನಕ್ಕೆ ಇದು ಸಿಗುವುದಿಲ್ಲ ಎಂದು ಹೇಳಿದರು.
    ರೈತ ಮುಖಂಡ ಅರುಣ್‌ಕುಮಾರ್ ಮಾತನಾಡಿ, ರೈತರಿಗೆ ಬೆಳೆಹಾನಿ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ. ಬೆಳೆಹಾನಿಗೆ 10 ಸಾವಿರ ರೂ.ಗಳ ಇನ್‌ಪುಟ್ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದರು.
    ರೈತ ಮುಖಂಡರಾದ ಕೆ.ಎಂ.ಅರುಣಕುಮಾರ್, ಬುಳ್ಳಾಪುರದ ಹನುಮಂತಪ್ಪ, ನೀಲಗುಂದ ಕರಿಬಸಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕರಿಬಸಪ್ಪ, ಚಿದಾನಂದಪ್ಪ ನೀಲಗುಂದ ಹೇಳಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts