More

    ಸಮಾಜದ ಸಂಘಟನೆಗೆ ಆದ್ಯತೆ ನೀಡಿ

    ಅಫಜಲಪುರ (ಕಲಬುರಗಿ): ಬ್ರಾಹ್ಮಣರು ಸಂಘಟನೆಗೆ ಆದ್ಯತೆ ನೀಡುವುದರ ಜತೆಗೆ ಸಮಾಜದ ಜನರೊಂದಿಗೆ ಬೆರೆತು ಜೀವನ ಸಾಗಿಸಬೇಕು ಎಂದು ಬೊಮ್ಮನಹಳ್ಳಿಯ ಶ್ರೀ ನರಸಿಂಹರಾವ ಮಹಾರಾಜರು ನುಡಿದರು.

    ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ರಾಹ್ಮಣ ಸಮಾಜ ವಿಕಾಸ ಸಂಸ್ಥೆಯ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣರು ದೇಶಕ್ಕೆ ಸಂಸ್ಕಾರ ನೀಡಿದವರು. ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ ಶ್ರೇಷ್ಠ ಸಮುದಾಯವಾಗಿದೆ. ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಿರಂತವಾಗಿ ನಡೆಯಲಿ, ಇದದಿಂದ ಸಾಕಷ್ಟು ಮಕ್ಕಳಿಗೆ ಪ್ರೋತ್ಸಾಹ ನೀಡದಂತಾಗುತ್ತದೆ ಎಂದರು.

    ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ದಯಾಘನ್ ಧಾರವಾಡಕರ ಮಾತನಾಡಿ, ಬ್ರಾಹ್ಮಣ ಸಮಾಜದವರು ಸಂಸದ, ಶಾಸಕರಾಗಿ ಆಯ್ಕೆಯಾಗುವುದು ಸುಲಭದ ಕೆಲಸವಲ್ಲ. ಹೀಗಾಗಿ ಸಕರ್ಾರ ನಮ್ಮ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಿಗಮ ಮಂಡಳಿ, ಪ್ರಾಧಿಕಾರ ಸೇರಿ ಇನ್ನಿತರ ಹುದ್ದೆಗಳಿಗೆ ನೇಮಕ ಮಾಡಬೇಕು. ನನ್ನ ಅಧಿಕಾರವಧಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.

    ಗಾಯತ್ರಿ ವಿಪ್ರ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಮುಖ ದತ್ತಾತ್ರೇಯರಾವ ಕುಲಕರ್ಣಿ ಮಾತನಾಡಿದರು. ತಾಲೂಕು ಅಧ್ಯಕ್ಷ ಆನಂದರಾವ ಆಲಮೇಲಕರ ವಾರ್ಷಿಕ ವರದಿ ಮಂಡಿಸಿದರು.

    ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

    ಪಿಕಾರ್ಡ್​ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ನಂದಾ ಕುಲಕರ್ಣಿ, ಪ್ರಮುಖರಾದ ಮುರಳೀಧರ ಪೂಜಾರಿ, ಉದಯಕುಮಾರ ದೇಶಪಾಂಡೆ, ದತ್ತಂಭಟ್ಟ ಪುರೋಹಿತ, ಪುರುಷೋತ್ತಮ ಪುರೋಹಿತ, ಸಂಜೀವಭಟ್ಟ ಪುರೋಹಿತ, ಪವನ ಕುಲಕರ್ಣಿ, ಪ್ರಹ್ಲಾದರಾವ ಬಿಲ್ವಾಡ, ಶ್ರೀಪಾದರಾವ ಕುಲಕರ್ಣಿ, ಮಹೇಶ ಮಠ, ಸಂತೋಷ ಕುಲಕರ್ಣಿ, ಕಲ್ಯಾಣಿ ಚಿನಿವಾರ, ಅಪ್ಪಾರಾವ ಕುಲಕರ್ಣಿ, ಗುರುರಾಜ ಕುಲಕರ್ಣಿ, ಕಲಾವತಿ ರೂಗಿ, ದತ್ತಾತ್ರೇಯ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts