More

    ಸಬಲ ಸಮಾಜಕ್ಕೆ ಸಂಘಟನೆ ಅಗತ್ಯ

    ಕೆಂಭಾವಿ : ವಿಶ್ವಕರ್ಮ ಸಮಾಜ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢವಾಗಬೇಕಾದರೆ ಸಂಘಟನೆ ಬಹಳ ಅಗತ್ಯವಾಗಿದೆ ಎಂದು ಶಹಾಪುರ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.

    ನಗನೂರ ಗ್ರಾಮದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದಿAದ ಮಂಗಳವಾರ ಹಮ್ಮಿಕೊಂಡ ವಿಶ್ವಕರ್ಮ ಪೂಜಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ವಿವಿಧ ಬಗೆಯ ಕಲೆಗಳನ್ನು ಸೃಷ್ಟಿಸಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ವಿಶ್ವಕರ್ಮ ಸಮಾಜ ಸಾಮಾಜಿಕ ಸಂಘಟನೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಾಗ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸೇವೆ ಪ್ರದರ್ಶಿಸಲು ಸಾಧ್ಯ ಎಂದರು.

    ಶ್ರೀ ಅಜೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮರು ಶ್ರಮ ಜೀವಿಗಳಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

    ಮಲ್ಲಣ್ಣ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಸೈದಾಪುರ, ಮನೋಹರ ವಿಶ್ವಕರ್ಮ, ಗುರುನಾಥ ವಿಶ್ವಕರ್ಮ, ಶರಣು ವಡಗೇರಿ, ಶಾಂತಣ್ಣ, ನಾಗಣ್ಣ, ದೇವಣ್ಣ, ಬಸವರಾಜ, ವಿಶ್ವನಾಥ, ಹಜ್ಜಣ್ಣ ಚನ್ನೂರ, ಶ್ರೀಶೈಲ, ಪವನ, ಚಂದ್ರಶೇಖರ ಏವೂರ, ಗುರು, ಶಿವಣ್ಣ, ಮಲ್ಲೇಶಪ್ಪ ಏವೂರ, ಗಂಗಣ್ಣ, ಶಿವಣ್ಣ, ಸುನೀಲ್, ಚಂದ್ರಶೇಖರ, ಅರುಣ, ಸೂಗಣ್ಣ ಇತರರಿದ್ದರು.

    ಪ್ರಭಾಕರ ವಿಶ್ವಕರ್ಮ ಸ್ವಾಗತಿಸಿದರು. ನಾಗಭೂಷಣ ಪತ್ತಾರ ನಿರೂಪಣೆ ಮಾಡಿ, ವಂದಿಸಿದರು. ಶರಣಪ್ಪ ಪತ್ತಾರ, ಹೊನ್ನಪ್ಪ ಚನ್ನೂರ, ಅಣ್ಣಾರಾವ್ ಯಡ್ರಾಮಿ ಅವರಿಂದ ಸಂಗೀತ ಕರ‍್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts