More

    ಸನ್ಮಾರ್ಗ, ಸದ್ವಿಚಾರ ಎಲ್ಲ ಧರ್ಮಗಳ ಸಾರ: ಕಾಳೇನಹಳ್ಳಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ

    ಶಿಕಾರಿಪುರ: ಭಗವಂತನ ಸನ್ನಿಧಾನವೆಂದರೆ ಅದು ಆನಂದದ ಸಾಮ್ರಾಜ್ಯ. ಅವನ ಆರಾಧನೆ ಮತ್ತು ಸ್ಮರಣೆಯಿಂದ ನಾವು ಆ ಆನಂದವನ್ನು ಅನುಭವಿಸಬಹುದು ಎಂದು ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
    ಸೋಮವಾರ ಮಂಗಳಭವನದಲ್ಲಿ ವಿಷ್ಣು ಸಮಾಜ ಆಯೋಜಿಸಿದ್ದ ಶ್ರೀ ಬಾಬಾ ರಾಮ್ ದೇವಜೀಕಾ ಭವ್ಯ ಜಾಗರಣ್‌ನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನೆಲ. ಎಷ್ಟೇ ಜಾತಿ-ಮತ-ಪಂಥಗಳಿದ್ದರೂ ಎಲ್ಲದರ ಸಾರವೂ ಸನ್ಮಾರ್ಗ, ಸದ್ವಿಚಾರವೇ ಆಗಿದೆ. ವಿಷ್ಣು ಸಮಾಜ ಇಂದು ಶ್ರೀರಾಮ್‌ದೇವ್ ಅವರ ಸ್ಮರಣೆಯ ನಿಮಿತ್ತ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಅವರ ಸಾಧನೆ, ಆದರ್ಶಗಳು ನಮಗೆ ಸ್ಫೂರ್ತಿ ಆಗಬೇಕು. ಸಹನಶೀಲ ಬದುಕು ನಮ್ಮದಾಗಬೇಕು ಎಂದರು.
    ಧರ್ಮ ಪಥವೆಂದರೆ ಅದು ರಾಜಪಥ. ನಾವು ನಮ್ಮ ಹಿರಿಯರು ಬಿಟ್ಟ ಸಂಪ್ರದಾಯ, ಪರಂಪರೆ ಆಚರಣೆಗಳಿಂದ ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮ ಸದಾ ನಮ್ಮ ಬೆಂಗಾವಲಿಗೆ ನಿಂತು ನಮ್ಮನ್ನು ರಕ್ಷಣೆ ಮಾಡುತ್ತದೆ. ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಯಾವದೇ ಸಮಾಜವಿರಲಿ ಸಮಾಜಮುಖಿ ಕಾರ್ಯಗಳಿಗೆ ತನ್ನನ್ನು ತೊಡಗಿಸಿಕೊಳ್ಳಬೇಕು. ಸಾಮಾಜಿಕ ಕಳಕಳಿಯಿಂದ ಆ ಸಮಾಜ ಸಧೃಢವಾಗುತ್ತದೆ ಎಂದು ಹೇಳಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ ವಿಷ್ಣು ಸಮಾಜ ಅತ್ಯಂತ ಪರಿಶ್ರಮಿ ಮತ್ತು ಸಂಯಮಿ ಸಮಾಜ. ಸದಾ ಸಮಾಜೋತ್ಥಾನ ಕಾರ್ಯ ಮಾಡುತ್ತ, ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಸಮಾಜ. ಅತ್ಯಂತ ದೇಶಪ್ರೇಮದ ಸಮಾಜವಾಗಿರುವ ವಿಷ್ಣು ಸಮಾಜ, ಆರ್ಥಿಕವಾಗಿ ಸಬಲರಾದರೂ ಅತ್ಯಂತ ಸಹೃದಯಿಗಳಾಗಿದ್ದಾರೆ. ಅವರ ಶಿಸ್ತು ಮತ್ತು ಅನುಶಾಸನ ಮಾದರಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts