More

    ಸದೃಢ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಯಕತ್ವ ಅಗತ್ಯ

    ಮುಳಬಾಗಿಲು: ದೇಶದ ರಕ್ಷಣೆಗೆ ಯೋಧರು, ಅನ್ನ ನೀಡಲು ರೈತರು ಅಗತ್ಯವಿರುವಂತೆ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಯಕತ್ವ ಮತ್ತು ಸರ್ಕಾರ ಇಲ್ಲದಿದ್ದರೆ ದೇಶ ದುರ್ಬಲವಾಗುತ್ತದೆ ಎಂದು ಆಧ್ಯಾತ್ಮಿಕ ಚಿಂತಕ ಶ್ರೀ ಕೊರ‌್ಲಹಳ್ಳಿ ವೆಂಕಟೇಶಾಚಾರ್ಯ ತಿಳಿಸಿದರು.

    ನಗರದ ಬಸ್ ನಿಲ್ದಾಣ ರಸ್ತೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ಛತ್ರಪತಿ ಮಹಾರಾಜರ 392ನೇ ಜಯಂತಿ ಮತ್ತು ಹಿಂದು ಸವಾಜೋತ್ಸವದಲ್ಲಿ ಶಿವಾಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ವಾತನಾಡಿದರು.
    ಮೊಲರು, ಬ್ರಿಟಿಷರು ದೇಶದ ಮೇಲೆ ದಾಳಿ ವಾಡಿ ಆಳ್ವಿಕೆ ನಡೆಸಿದರೂ ಹಿಂದು ಸಂಸ್ಕೃತಿ, ಪರಂಪರೆಯನ್ನು ಅಳಿಸಲು ಸಾಧ್ಯವಾಗಿಲ್ಲ, ಹಲವಾರು ದೇವಾಲಯಗಳ ಮೇಲೆ ಮೊಲರು ದಾಳಿ ವಾಡಿ ದಬ್ಬಾಳಿಕೆ ವಾಡುತ್ತಿದ್ದ ಕಾಲದಲ್ಲಿ ಶಿವಾಜಿ ಮಹಾರಾಜರು ಹಿಂದುಗಳ ರಕ್ಷಣೆ ವಾಡಿದ್ದಾರೆ. ಅವರ ಆದರ್ಶಗಳು ಭಾರತೀಯರಲ್ಲಿ ಸದಾ ಪ್ರಜ್ವಲಿಸುವಂತಾಗಬೇಕು ಎಂದರು.

    ಸಂಸದ ಎಸ್.ಮುನಿಸ್ವಾಮಿ ವಾತನಾಡಿ, ಇಂಚಿಂಚೂ ಭೂಮಿ ಭಾರತ ಸಾರ್ವಭೌಮತ್ವದ ಸ್ವತ್ತಾಗಿದೆ. ಇಲ್ಲಿನ ಕಾನೂನು ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕಾಗಿದೆ. ಉಲ್ಲಂಸುವವರು, ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ಇಲ್ಲಿ ಸ್ಥಳವಿಲ್ಲ ಎಂದರು. ಕೋಲಾರದ ಕ್ಲಾಕ್ ಟವರ್‌ಗೆ ಶ್ರೀದಲ್ಲೇ ತ್ರಿವರ್ಣ ಬಣ್ಣ ಬಳಿದು ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸಲಾಗುವುದು. ಹಿಂದು-ಮುಸ್ಲಿಮರು, ಇನ್ನಿತರ ಧರ್ಮದವರು ದೇಶದಲ್ಲಿ ಸೌಹಾರ್ದದಿಂದ ಬಾಳಬೇಕಾಗಿದೆ ಎಂದರು.

    ಹಿಂದುಪರ ಹೋರಾಟಗಾರ್ತಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಹಾರಿಕಾ ಮಂಜುನಾಥ್ ವಾತನಾಡಿ, ಶಿವಾಜಿಗೆ ತಾಯಿ ಜೀಜಾಬಾಯಿ ಹಿಂದು ಸವಾಜದ ರಕ್ಷಣೆಗೆ ಕಂಕಣಬದ್ಧವಾಗಲು ಪ್ರೇರೇಪಿಸಿದರು. ಅದರಂತೆ ಪ್ರತಿ ಕುಟುಂಬದಲ್ಲೂ ಶಿವಾಜಿಯಂತಹ ನಾಯಕರು ಹುಟ್ಟಬೇಕು ಎಂದರು.

    ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೇಲ್ ದಿಕ್ಸೂಚಿ ಭಾಷಣ ವಾಡಿದರು. ಸಾವಿರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ನಗರಸಭಾ ಸದಸ್ಯರಾದ ಎಂ.ಪ್ರಸಾದ್, ಗರಡಿ ಆರ್.ಶಂಕರಪ್ಪ, ಹಿಂದುಪರ ಸಂಟನೆಗಳ ಮುಖಂಡರಾದ ವಿ.ಜಯಪ್ಪ, ಪಳನಿ, ಬಿ.ಎಸ್.ರಮೇಶ್, ಕೆ.ಜೆ.ಮೋಹನ್, ವಿಶ್ವನಾಥರೆಡ್ಡಿ ಸೇರಿದಂತೆ ಅನೇಕ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts