More

    ಸದೃಢ ದೇಶ ನಿರ್ಮಾಣಕ್ಕೆ ಸಹಕರಿಸಿ

    ನ್ಯಾಮತಿ: ಯುವಶಕ್ತಿ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣವಾದಾಗ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯವಿದೆ ಎಂದು ತಹಸೀಲ್ದಾರ್ ಆರ್.ವಿ.ಕಟ್ಟಿ ಹೇಳಿದರು.
    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಆರೋಗ್ಯ ಇಲಾಖೆ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ರಕ್ತದಾನ (ಸಂಗ್ರಹ) ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಶಂಸನಾ ಪತ್ರ ನೀಡಿ ಅವರು ಮಾತನಾಡಿದರು.
    ಹೊನ್ನಾಳಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ.ಆರ್.ಬಂತಿ ಮಾತನಾಡಿ, ಮನುಷ್ಯನ ದೇಹ ಒಂದು ಸಂಜೀವಿನಿ ಮರ ಇದ್ದಂತೆ. ಸ್ವ-ಇಚ್ಛೆಯಿಂದ ರಕ್ತದಾನ ಮಾಡಿದರೆ ಅದು ಮತ್ತೊಬ್ಬರ ಜೀವಕ್ಕೆ ಸಹಕಾರಿ ಆಗಲಿದೆ. ಆರೋಗ್ಯವಂತ ವ್ಯಕ್ತಿಗಳು ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ರಕ್ತದಾನ ಮಾಡುವಂತೆ ಹೇಳಿದರು.
    ಅಪಘಾತ ಮತ್ತಿತರರ ಘಟನೆ ಸಂಭವಿಸಿದ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತವು ರೋಗಿಯ ಜೀವಕ್ಕೆ ವರದಾನವಾಗಲಿದೆ ಎಂದರು.
    ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿಯ ಡಾ.ಗೀತಾ ಡಿ. ಎಚ್, ಡಾ. ಅನುಷ, ರಾಘವೇಂದ್ರ, ಸಂತೋಷ, ಶೈಲಾ, ಗಾಯತ್ರಿ, ರಾಜಶೇಖರ, ಕಿಶೋರ್ ತಂಡದಿಂದ ಸುಮಾರು 40 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು.
    ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೇಣುಕಾನಂದ ಆರ್.ಮೆಣಸಿನಕಾಯಿ, ಸರ್ಕಾರಿ ನೌಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ.ನಿಂಗಪ್ಪ, ಬೆಸ್ಕಾಂನ ಎಇ ಶ್ರೀನಿವಾಸ್ ಬಿ.ಕೆ, ಶಿರಸ್ತೇದಾರರಾದ ಕೆಂಚಮ್ಮ, ಚಂದ್ರಶೇಖರ್, ಉಪತಹಶೀಲ್ದಾರ್ ಎ.ಸಿ.ನಂದ್ಯಪ್ಪ, ಹಿರಿಯ ಪತ್ರಕರ್ತ ಸದಾಶಿವಯ್ಯ ಹಿರೇಮಠ್, ಕಾನಿಪ ಸಂಘದ ತಾಲೂಕು ಸಂಚಾಲಕ ಎಂ.ಎಸ್. ಶಾಸ್ತ್ರಿ ಹೊಳೆಮಠ್, ಸಾಮಾಜಿಕ ಕಾರ್ಯಕರ್ತ ವಿಜೇಂದ್ರ ಮಹೇಂದ್ರಕರ್, ತಾ.ಪಂ.ಕಾರ್ಯ ನಿರ್ವಹಣಾ ಅಧಿಕಾರಿ ಟಿ.ಕರಿಬಸಪ್ಪ, ಗೃಹರಕ್ಷಕದಳದ ರಾಘವೇಂದ್ರ ಮುಳೇಕರ, ಕಂದಾಯ ಇಲಾಖೆ ತಾಲೂಕು ಪಂಚಾಯಿತಿ ಅಧಿಕಾರಿಗಳು, ಗೃಹರಕ್ಷಕದಳದ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts