More

    ರಕ್ತದಾನದಿಂದ ಜೀವ ಸಂರಕ್ಷಣೆ

    ಕೊಲ್ಹಾರ: ಸತ್ವಯುತ ಆಹಾರದ ಕೊರತೆ, ಆಹಾರದಲ್ಲಿ ಕಲಬೆರಕೆಯಿಂದ ಅಪೌಷ್ಟಿಕತೆ ಉಂಟಾಗುತ್ತಿದ್ದು, ರಕ್ತಹೀನತೆ ಜನರಲ್ಲಿ ಹೆಚ್ಚಾಗುತ್ತಿದೆ ಎಂದು ಯುವ ಮುಖಂಡ ಸಂತೋಷ ಚನಗೊಂಡ ಹೇಳಿದರು.
    ತಾಲೂಕಿನ ಮಸೂತಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಗಿ ಹಾಗೂ ಮಸೂತಿಯ ಗೆಳೆಯರ ಬಳಗದ ಸಹಯೋಗದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

    ಪ್ರಭುಕುಮಾರ ಶಿವಾಚಾರ್ಯರು ಶಿಬಿರ ಉದ್ಘಾಟಿಸಿದರು. ಕೂಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗೋವಿಂದರಾಜು ಮಾತನಾಡಿದರು. ತಾಪಂ ಸದಸ್ಯ ಜಿ.ಎಂ. ಯರಂತೇಲಿ, ವೈದ್ಯರಾದ ಬಿ.ಎಸ್. ಸಂದಿಮನಿ, ಎಸ್.ಎಸ್. ಗೌರಿ, ಪಿಕೆಪಿಎಸ್ ಅಧ್ಯಕ್ಷ ಕೆ.ವಿ. ಕುಲಕರ್ಣಿ, ಮಸಾಪ ಕೊಲ್ಹಾರ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಸಾಲಳ್ಳಿ, ಶ್ರೀಶೈಲ ಹಂಗರಗಿ, ಬಿ.ಜಿ. ಬಿಷ್ಟಗೊಂಡ, ಮಲ್ಲಪ್ಪ ಸಾಲಳ್ಳಿ, ಈರಣ್ಣ ಬರಗಿ, ಬಸವರಾಜ ಸಾಲಳ್ಳಿ, ಅಪ್ಪು ಕಾಗಲ್, ಶ್ರೀಮಂತ ಕೊಲ್ಹಾರ, ಕೂಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಮಸೂತಿ ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಗೆಳೆಯರ ಬಳಗದ ಯುವಕರು ಭಾಗವಹಿಸಿದ್ದರು.
    ಶಿಬಿರದಲ್ಲಿ ಒಟ್ಟು 54 ಜನ ರಕ್ತದಾನ ಮಾಡಿದರು. ಕೂಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸೋಮಶೇಖರ ಹನುಮಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts