More

    ಸದೃಢ ದೇಶಕ್ಕಾಗಿ ಮತದಾನ ಅವಶ್ಯ

    ಯಾದಗಿರಿ: ಸದೃಢ ದೇಶ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡುವುದು ಅವಶ್ಯವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಅಜಯ್ ಬಾಡೋ ಸಲಹೆ ನೀಡಿದರು.

    ಬುಧವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಪಂನ ಸ್ವೀಪ್ ಸಮಿತಿ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ಮತದಾನ ಮಾಡಲು ಮುಂದೆ ಬರಬೇಕು. ಈ ಮೂಲಕ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಮುಖ ಪಾತ್ರ ವಹಿಸುತ್ತವೆ. ಸುಭದ್ರ ದೇಶ ಕಟ್ಟಲು ಗಟ್ಟಿ ನಾಯಕತ್ವದ ಅವಶ್ಯವಿದೆ. ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಸ್ವೀಪ್ ಸಮಿತಿಯಿಂದ ಸಾಕಷ್ಟು ಜನಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಮತದಾನದ ಮಹತ್ವದ ಬಗ್ಗೆ ಯುವಕರು ಅಧ್ಯಯನ ಮಾಡಬೇಕು ಎಂದರು.

    ಡಾನ್ ಬೋಸ್ಕೊ ಶಾಲಾ ಮಕ್ಕಳಿಂದ ಮತದಾನ ಜಾಗೃತಿ ಕುರಿತ ಹಾಡಿಗೆ ನೃತ್ಯ ಪ್ರದರ್ಶನ ಮತ್ತು ಸ್ವೀಪ್ ಚಟುವಟಿಕೆಗಳಡಿ ಮತದಾನ ಮಾಡುವುದು, ಪಟ್ಟಿಯಲ್ಲಿ ಹೆಸರು ನೋಂದಣಿ ಕುರಿತು ಕಲಾ ತಂಡದಿಂದ ತಿಳಿವಳಿಕೆ ಮೂಡಿಸಲಾಯಿತು.

    ರಾಜ್ಯ ಮುಖ್ಯ ಚುನಾವಣಾ ಅಕಾರಿ ಮನೋಜ್ ಕುಮಾರ್ ಮೀನಾ, ಅಪರ ಮುಖ್ಯ ಚುನಾವಣಾ ಅಕಾರಿ ರಾಜೇಂದ್ರ ಚೋಳನ್, ಜಂಟಿ ಮುಖ್ಯ ಚುನಾವಣಾ ಅಕಾರಿ ರಾಘವೇಂದ್ರ ಆಚಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts