More

    ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ

    ಯಾದಗಿರಿ: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ, ಜಾರಿಗೊಳಿಸುವಂತೆ ಈಗಾಗಲೇ ಸಾಕಷ್ಟು ಹೋರಾಟ ಮಾಡುತ್ತ ಬಂದಿದ್ದರೂ ನಮ್ಮ ಕೂಗು ಇನ್ನೂ ಆಳುವ ಪಕ್ಷಗಳಿಗೆ ಕೇಳಿಸುತ್ತಿಲ್ಲ ಎಂದು ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಅಸಮಾಧಾನ ವ್ಯಕ್ತಪಡಿಸಿದರು.

    ಈ ಹಿಂದಿನ ಸಿದ್ಧರಾಮಯ್ಯ ಸರ್ಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತದೆ ಎಂದು ನಂಬಿ ನಾವು ಮೋಸ ಹೋಗಿದ್ದೇವೆ. ಹೀಗಾಗಿ ಈ ಬಾರಿ ನಮ್ಮ ಸಮುದಾಯ ಆರ್ಎಸ್ಎಸ್ ಮೂಲದ ಬಿಜೆಪಿ ಸರ್ಕಾರವನ್ನು ನಂಬಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನಾದರೂ ನಮ್ಮ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    101 ಪರಿಶಿಷ್ಟರಲ್ಲಿ ಸಾಕಷ್ಟು ವೈರುಧ್ಯಗಳಿವೆ. ಉಡುಗೆ ತೊಡುಗೆ, ಹಬ್ಬ, ಆಚರಣೆಗೆ ಹೀಗೆ ಪ್ರತಿಯೊಂದರಲ್ಲೂ ಒಂದೊಂದು ಜಾತಿಗೆ ತನ್ನದೆಯಾದ ಪದ್ಧತಿಗಳಿದ್ದು, ಮೂಲ ಅಸ್ಪಶ್ಯರಾದ ನಮಗೆ ಮೊದಲಿನಿಂದಲೂ ಅನ್ಯಾಯವಾಗುತ್ತಿದೆ. ಅಲ್ಲದೆ ನಮ್ಮ ಸಹೋದರ ಸಮುದಾಯದವರಾದ ಡಾ.ಮಲ್ಲಿಕಾಜರ್ುನ ಖರ್ಗೆ ಜಿ.ಪರಮೇಶ್ವರ, ಡಾ.ಎಚ್.ಸಿ.ಮಹಾದೇವಪ್ಪ, ಶ್ರೀನಿವಾಸ ಪ್ರಸಾದ್ ಇವರ್ಯಾರು ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಡ ಹೇರದಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಯಾದಗಿರಿ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ನಾವು ಮನಸಿ ಸಲ್ಲಿಸಿದ ವೇಳೆ ವರದಿ ಮಂಡನೆಯ ಬಗ್ಗೆ ಚಚರ್ಿಸುವಂತೆ ಅಂದಿನ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆಗೆ ತಿಳಿಸಿದರು. ಆದರೆ ಅವು ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. ಸರ್ಕಾರದ ಯೋಜನೆಗಳ ಲಾಭವನ್ನು ಬಹುಪಾಲು ಸ್ಪರ್ಶ ಜನಾಂಗದ ದಲಿತರು ತೆಗೆದು ಕೊಳ್ಳುತ್ತಿದ್ದಾರೆ. ಇದರಿಂದ ಮೂಲ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.

    ಮುಖಂಡರಾದ ಮಲ್ಲಣ್ಣ ದಾಸನಕೇರಿ, ಶಾಂತರಾಜ ಮೋಟನಳ್ಳಿ, ಖಂಡಪ್ಪ ದಾಸನ್, ಸ್ಯಾಂಸನ್ ಮಾಳಿಕೇರಿ,ದೇವಿಂದ್ರನಾಥ ನಾದ್, ಲಿಂಗಪ್ಪ ಹತ್ತಿಮನಿ, ಶಾಂತಪ್ಪ ಖಾನಳ್ಳಿ, ರಾಜಣ್ಣ ದಾಸನಕೇರಿ, ರಾಮಚಂದ್ರ ಕಾಂಬ್ಳೆ, ರವಿ ನಾವೆದ್ಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts