More

    “ಸತ್ಸಂಗ” ವಿಶ್ವ ಹಿಂದು ಪರಿಷತ್ ಬಲ

    ಭದ್ರಾವತಿ: ಸತ್ಸಂಗ ವಿಶ್ವ ಹಿಂದು ಪರಿಷತ್ ಸಂಘಟನೆಯನ್ನು ಬಲಗೊಳಿಸುವ ಪ್ರಮುಖ ಕಾರ್ಯಕ್ರಮಗಳಾಗಿವೆ ಎಂದು ಪರಿಷತ್‌ನ ಪ್ರಾಂತ ಉಪಾಧ್ಯಕ್ಷ ಹಾ.ರಾಮಪ್ಪ ತಿಳಿಸಿದರು.
    ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ಏರ್ಪಡಿಸಿದ್ದ ಪ್ರಾಂತ ಸತ್ಸಂಗ ಅಭ್ಯಾಸ ವರ್ಗದಲ್ಲಿ ಮಾತನಾಡಿದ ಅವರು, ಇಂತಹ ಗುಣಮಟ್ಟದ ಹಾಗೂ ಸಮಯ ಪಾಲನೆ ಮಾಡುವಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ಕಡ್ಡಾಯವಾಗಿ ನಡೆಯಬೇಕು. ಆಗ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ ಎಂದರು.
    ಪ್ರಾಂತ ಪ್ರಮುಖ್ ನಂದಗೋಪಾಲ್ ಮಾತನಾಡಿ, ಆರ್‌ಎಸ್‌ಎಸ್‌ಗೆ ಶಾಖೆಗಳ ಕಾರ್ಯಕ್ರಮಗಳು ಎಷ್ಟು ಮುಖ್ಯವೋ ವಿಎಚ್‌ಪಿಗೆ ಸತ್ಸಂಗದಂತಹ ಕಾರ್ಯಕ್ರಮಗಳು ಅಷ್ಟೇ ಮುಖ್ಯ. ಆಧ್ಯಾತ್ಮಿಕತೆ ಎಂಬುದು ದೇಶಭಕ್ತರ ಮೂಲಮಂತ್ರ, ಸಂಘಟನೆಯ ಜೀವಾಳ. ಸತ್ಸಂಗದಲ್ಲಿ ನಿರಂತರವಾಗಿ ಭಾಗವಹಿಸುವಿಕೆ ಹೆಚ್ಚುತ್ತಾ ಸಾಗಬೇಕು. ಸಮಸ್ಯೆಗಳು ಬಂದಲ್ಲಿ ಅದರ ಪರಿಹಾರಕ್ಕೆ ಸಿದ್ಧರಾಗಬೇಕು. ಒಳ್ಳೆಯವರ ಸಂಗದೊಂದಿಗೆ ಕೆಟ್ಟವರ ಸಂಗ ದೂರಾಗುತ್ತದೆ. ಅಂತಹ ಒಳ್ಳೆಯವರ ಸಂಗ ಎಲ್ಲರದ್ದಾದಾಗ ಮಾತ್ರ ಸ್ವಾಸ್ಥೃ ಸಮಾಜ ನಿರ್ಮಾಣ ಸಾಧ್ಯ ಎಂದರು.
    ವಿಎಚ್‌ಪಿ ಜಿಲ್ಲಾ ಮಾಜಿ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಸದ್ಭಾವ, ಸದಭಿರುಚಿಗಳು ಮೇಳೈಸಿದಾಗ ಸತ್ಕಾರ್ಯ ಎಂಬುದು ತಾನಾಗಿಯೆ ಆಗುತ್ತದೆ. ಇಂದು ಮನುಷ್ಯ ಯಾಂತ್ರಿಕ ಜೀವನದ ಒತ್ತಡದಲ್ಲಿ ಜೀವಿಸುತ್ತಿದ್ದು, ಕನಿಷ್ಠ ದೇವರನ್ನು ಸ್ಮರಿಸಲು ಸಹ ಬಿಡುವಿಲ್ಲದಂತಾಗಿದೆ. ಅಂತಹ ಸಂದರ್ಭದಲ್ಲಿ ಸತ್ಸಂಗ ಎಂಬುದು ಎಲ್ಲರ ಮೇಲೆ ಮಹತ್ತರವಾದ ಪ್ರಭಾವ ಬೀರುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts