More

    ಸತ್ಕಾರ್ಯಗಳಿಂದ ಬದುಕು ಹಸನು

    ಯಾದಗಿರಿ: ಸಮಾಜದಲ್ಲಿ ನಾವು ಕೈಗೊಳ್ಳುವ ಸತ್ಕಾರ್ಯಗಳಿಂದ ನಮ್ಮ ಬದುಕು ಹಸನಾಗುವುದಲ್ಲದೆ, ಮನಸ್ಸು ಸದಾ ಸಕಾರಾತ್ಮಕ ಚಿಂತನೆಗೆ ಒತ್ತು ಕೊಡುತ್ತದೆ ಎಂದು ಅಬ್ಬೆತುಮಕೂರು ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

    ಗುರುವಾರ ಸಂಜೆ ನಗರದ ಹೊರ ವಲಯದಲ್ಲಿನ ಅನುಗೃಹ ಕ್ಷೇತ್ರ(ಶ್ರೀರಾಚೋಟ್ಟಿ ವೀರಣ್ಣ ದೇವಸ್ಥಾನ ಸಮೀಪ)ದಲ್ಲಿ ಬೆಂಗಳೂರಿನ ಅನುಗೃಹ ಫೌಂಡೇಶನ್ನಿಂದ ನಿಮರ್ಿಸುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ನೂತನ ಮಠದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಹಿತೋಪದೇಶ ನೀಡಿ, ಬದುಕಿನ ಜಂಜಾಟದಲ್ಲಿ ಮನುಷ್ಯ ಇಂದು ಕೇವಲ ತನ್ನ ಸ್ವಾರ್ಥ ಸಾಧನೆಗೆ ಬಡಿದಾಡುತ್ತಿದ್ದಾನೆ. ಜೀವನದ ಕಿಂಚಿತ್ತು ಸಮಯವಾದರೂ ಸಮಾಜ ಸೇವೆಗೆ ಮೀಸಲಿಡುವ ಅಗತ್ಯವಿದೆ ಎಂದರು.

    ಕಳೆದ ಹಲವು ವರ್ಷಗಳ ಹಿಂದೆ ನಗರದ ಗಾಂಧಿ ವೃತ್ತದ ಸಮೀಪದಲ್ಲಿ ರಾಘವೇಂದ್ರ ಸ್ವಾಮಿಗಳ ಮಠವಿತ್ತು. ಇದೀಗ ಉತ್ತರ ದಿಕ್ಕಿನಲ್ಲಿ ಭವ್ಯವಾದ ಮಠ ನಿಮರ್ಾಣಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಶ್ರೀ ಗುರುಸಾರ್ವಭೌಮರು ಕಲಿಯುಗದ ಕಾಮಧೇನು ಎಂದೇ ಖ್ಯಾತಿ ಪಡೆದಿದ್ದಾರೆ. ಸಮೀಪದಲ್ಲೇ ಘನ ಪಂಡಿತ ಶ್ರೀವಿಶ್ವಾರಾಧ್ಯರ ಸನ್ನಿಧಾನವೂ ಇರುವುದರಿಂದ ಭವಿಷ್ಯದಲ್ಲಿ ಈ ನೆಲ ಪಾವನ ಕ್ಷೇತ್ರವಾಗಿ ಹೊರ ಹೊಮ್ಮಲಿದೆ ಎಂದು ತಿಳಿಸಿದರು.

    ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಧಾಮರ್ಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಮನಸ್ಸು ಹಗುರಾಗುತ್ತದೆ. ನಗರದಲ್ಲಿ ನೂತನ ರಾಯರ ಮಠ ಭವ್ಯವಾಗಿ ನಿಮರ್ಿಸುತ್ತಿದ್ದು, ಅನುಗೃಹ ಫೌಂಡೇಶನ್ನಿಂದ ಮುಂದಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿ ಎಂದು ಆಶಿಸಿದರು.
    ಫೌಂಡೇಶನ್ ಟ್ರಸ್ಟಿ ಗುರುರಾಜ ಚಿತ್ತಾಪುರಕರ್ ಪ್ರಾಸ್ತಾವಿಕ ಮಾತನಾಡಿ, ಉತ್ತಮ ಚಿಂತನೆಗಳೊಂದಿಗೆ ನಾವು ಯಾದಗಿರಿಯಲ್ಲಿ ರಾಯರ ಮಠ ನಿಮರ್ಾಣಕ್ಕೆ ಮುಂದಾಗಿದ್ದೇವೆ. ಸನಾತನ ಹಿಂದು ಧರ್ಮದ ಬಗ್ಗೆ ನಮ್ಮ ಯುವಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸುವುದು ಸೇರಿ ಅನೇಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಫೌಂಡೇಶನ್ ಉದ್ದೇಶವಾಗಿದೆ ಎಂದು ವಿವರಿಸಿದರು.
    ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ಅಸಗೋಡು ಜಯಸಿಂಹ, ಪ್ರಮುಖರಾದ ಡ.ಸುಭಾಶ್ಚಂದ್ರ ಕೌಲಗಿ, ವಾದಿರಾಜ ಭಾರದ್ವಾಜ, ಡಾ.ಸಂಜಯ್, ಹರಿಪ್ರಸನ್ನ, ವೆಂಕಟರಡ್ಡಿ ಅಬ್ಬೆತುಮಕೂರು ಇದ್ದರು. ಡಾ.ಸಿದ್ದರಾಜ ರಡ್ಡಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts