More

    ಸತೀಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ

    ಬಾಗಲಕೋಟೆ: ಶಾಸಕ ಸತೀಶ ಜಾರಕಿಹೊಳಿ ಶೋಷಿತ ಸಮುದಾಯದ ಪರವಾಗಿ ಹೋರಾಟ ಮಾಡುತ್ತಾ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಬಿಜೆಪಿಗರು, ಮನುವಾದಿಗಳು, ಪಟ್ಟ್ರಭದ್ರ ಹಿತಾಸಕ್ತಿ ಹಿಂದು ಶಬ್ಧ ತಿರುಚಿ ಸತೀಶ ವಿರುದ್ಧ ಷಡ್ಯಂತ್ರ ನಡೆಸಿವೆ ಎಂದು ಮಾನವ ಬಂದುತ್ವ ವೇದಿಕೆ ಜಿಲ್ಲಾ ಸಂಚಾಲಕ ಶ್ರೀಶೈಲ ಅಂಟಿನ ಆರೋಪಿಸಿದರು.
    ಸತೀಶ ಜಾರಕಿಹೊಳಿ ಬುದ್ಧ, ಬಸವ, ಅಂಬೇಡ್ಕರ ಅವರನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ೨೫ ವರ್ಷಗಳಿಂದ ಪ್ರತ್ಯೇಕ ಸಂಘಟನೆ ಕಟ್ಟಿಕೊಂಡು ಸೇವೆ ಮಾಡುತ್ತಿದ್ದಾರೆ. ಮೂಢನಂಬಿಕೆ ಹೋಗಲಾಡಿಸಲು ಶೋದ್ರರ ಪರವಾಗಿ ಧ್ವನಿ ಎತ್ತಿದ್ದಾರೆ. ಇದನ್ನು ಸಹಿಸಲಾಗದೇ ಬಿಜೆಪಿ ನಾಯಕರು ಸತೀಶ ಜಾರಕಿಹೊಳಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ವಕೀಲ ಚಂದ್ರಶೇಖರ ರಾಠೋಡ ಮಾತನಾಡಿ, ಸತೀಶ ಜಾರಕಿಹೊಳಿ ಒಬ್ಬ ವಿಚಾರವಂತ ಇದ್ದಾರೆ. ಬುದ್ಧ, ಬಸವ, ಅಂಬೇಡ್ಕರ ವಿಚಾರಗಳು ಮನೆಗಳಿಗೆ ಮುಟ್ಟಬಾರದು ಎನ್ನುವ ದುರುದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲದೇ ಇರುವ ವಿಚಾರ ಮುನ್ನಲೆಗೆ ತಂದು ಜಾರಕಿಹೊಳಿ ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೆಲಸ ಮಾಡ್ತಿದ್ದಾರೆ ಪರ್ಶಿಯನ್ ಭಾಷೆಯಲ್ಲಿ ಹಿಂದೂ ಶಬ್ದದ ಅರ್ಥ ಹೀಗಿದೆ. ಈ ಬಗ್ಗೆ ಚರ್ಚೆ ಆಗಬೇಕು ಎಂದಿದ್ದಾರೆ. ಅದನ್ನೆ ಹಿಂದೂ ಧರ್ಮಕ್ಕೆ ಅವಮಾನ ಆಗಿದೆ ಎಂದು ಅನಾವಶ್ಯಕ ಗುಲ್ಲು ಎಬ್ಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಿಂದೆ ಪೇಜಾವರ ಶ್ರೀಗಳು ಹಿಂದೂ ಧರ್ಮ ಬೇರೆ, ಬ್ರಾಹ್ಮಣ ಧರ್ಮ ಬೇರೆ ಅಂದಿದ್ದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ಶಾಸಕ ಮುರುಗೇಶ ನಿರಾಣಿ ವಾಟ್ಸಪ್‌ನಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನ ಸಂದೇಶ ಕಳಿಸಿದಾಗ ಹಿಂದೂ ಧರ್ಮಕ್ಕೆ ಅವಮಾನ ಆಗಿರಲಿಲ್ಲವೆ…? ಇವರೇನು(ಬಿಜೆಪಿ) ಹಿಂದೂ ಅನ್ನೋದು ಗುತ್ತಿಗೆ ಪಡೆದಿದ್ದಾರಾ?. ತಮ್ಮ ರಾಜಕಾರಣಕ್ಕೆ ಯಾವುದು ಅನುಕೂಲವಾಗುತ್ತೆ ಅಂತ ವಿಷಯ ಕೆದಕಿ ಜನರಲ್ಲಿ ಗೊಂದಲ ಮೂಡಿಸಿ, ಭಾವನೆಗಳ ಜೊತೆ ಆಟ ಆಡುತ್ತಾರೆ. ಬಿಜೆಪಿ, ಸಂಘಪರಿವಾರ ಇದನ್ನು ಕೈಬಿಡಬೇಕು. ಸತೀಶ ಜಾರಕಿಹೊಳಿ ಬೆಂಬಲಿಗರು ರಾಜ್ಯಾದ್ಯಂತ ಇದ್ದಾರೆ. ನಮಗೂ ಹೋರಾಟ ಮಾಡುವುದು ಗೊತ್ತಿದೆ. ನೀವು ಯಾವ ದಾರಿಯಲ್ಲಿ ಹೋಗುತ್ತೀರಿ ಅದೇ ದಾರಿಯಲ್ಲಿ ಅದೇ ದಾರಿಯಲ್ಲಿ ಉತ್ತರ ಕೊಡುವುದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.
    ಮುಖಂಡರಾದ ಬಸವರಾಜ ಗಂಗೂರ, ಖಾಸಿಂಲಿ ಗೋಠೆ, ಜಾವೇದ ಡಿ, ರವಿ ಕಾಂಬಳೆ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts