More

    ಸಣ್ಣ ಸಮುದಾಯಕ್ಕೂ ಪಕ್ಷದಲ್ಲಿ ಅವಕಾಶ

    ಚಿಕ್ಕಮಗಳೂರು: ಕಾಂಗ್ರೆಸ್, ಜೆಡಿಎಸ್ ರೀತಿ ವಂಶ ಪಾರಂಪರಿಕ ರಾಜಕಾರಣ ಬಿಜೆಪಿಯಲ್ಲಿಲ್ಲ. ಸಾಮಾನ್ಯ ಕಾರ್ಯಕರ್ತರು, ಸಣ್ಣ ಸಣ್ಣ ಸಮುದಾಯದವರನ್ನು ಗುರುತಿಸಿ ಅವಕಾಶ ನೀಡುವ ಜತೆಗೆ, ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

    ಶನಿವಾರ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿ ಯುವ ಮೋರ್ಚಾಗಳ ಕ್ಷೇತ್ರಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ರಬ್ಬರ್ ಸ್ಟಾಂಪ್ ಅಲ್ಲ ಅತ್ಯಂತ ಕ್ರಿಯಾಶೀಲರು. ವರ್ಷವಿಡೀ ದೇಶ ಮತ್ತು ಜನರ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡುತ್ತಾರೆ ಎಂದರು.
    ಎಂಟು ವರ್ಷದ ಅವಧಿಯಲ್ಲಿ ಪ್ರಧಾನ ಮಂತ್ರಿಗೆ ಯಾವುದೇ ಆರೋಪ, ಭ್ರಷ್ಟಾಚಾರ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಜನ ಸಾಮಾನ್ಯರ ಕಷ್ಟಗಳನ್ನು ಅರಿತು ಉಚಿತ ಸಿಲಿಂಡರ್, ಶೌಚಗೃಹ ನಿರ್ವಿುಸಿಕೊಟ್ಟಿದ್ದಾರೆ. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಹೇಳಿದರು.

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ನಮಗೆ ಜಾತಿ ಇದೆ, ಆದರೆ ಪಕ್ಷಕ್ಕೆ ಜಾತಿ ಇಲ್ಲ. ಪಕ್ಷ ಜಾತಿ ಆಧಾರದಲ್ಲಿ ಕೆಲಸ ಮಾಡುವುದಿಲ್ಲ. ಬಿಜೆಪಿಯಲ್ಲಿ ಎಲ್ಲ ಜಾತಿಗಳಿಗೆ ಸಮಾನ ಅವಕಾಶ ನೀಡುವ ನೀತಿ ಇದೆ. ಇದರಿಂದ ಚಹ ಮಾರುವ ಹುಡುಗ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತು. ಉಳಿದ ಪಕ್ಷಗಳು ಜಾತಿ ಕಡೆಗಣಿಸಿ ರಾಜಕಾರಣ ಮಾಡಿದರೆ ನಾವು ಜಾತಿಯನ್ನು ಜೋಡಿಸಿ ಕೆಲಸ ಮಾಡುತ್ತೇವೆ. ಇದು ನಮಗೂ ಬೇರೆ ಪಕ್ಷಗಳಿಗೆ ಇರುವ ವ್ಯತ್ಯಾಸ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts