More

    ಸಡಿಲಿಕೆಗೆ ತುಸು ಹರ್ಷ…

    ಹುಬ್ಬಳ್ಳಿ: ಭಾರತ ಸ್ತಬ್ಧತೆ ಆದೇಶ ಉಲ್ಲಂಘನೆ ಪ್ರಮಾಣ ಅಧಿಕ, ಸೀಲ್​ಡೌನ್ ಪ್ರದೇಶದತ್ತ ಪೊಲೀಸರ ಗಮನ ಹೆಚ್ಚಳ, ಅಲ್ಲಲ್ಲಿ ಬೈಕ್ ದಾಖಲೆ ಪರೀಕ್ಷೆ, ವಶಪಡಿಸಿಕೊಳ್ಳುವಿಕೆ ಮಧ್ಯದಲ್ಲೇ ಒಂದೆರಡು ಕಡೆ ಮಳಿಗೆ ತೆರೆಯುವ ಮೂಲಕ ಲಾಕ್​ಡೌನ್ ಸಡಿಲಿಕೆಯ ಲಕ್ಷಣಗಳು ಗುರುವಾರ ನಗರದಲ್ಲಿ ಗೋಚರಿಸಿದವು.

    ವಿದ್ಯಾನಗರ, ಕೋರ್ಟ್ ವೃತ್ತ ಸೇರಿ ಕೆಲವೆಡೆ ವಾಹನಗಳ ಮಳಿಗೆಗಳು ಬಹುದಿನದ ನಂತರ ಬಾಗಿಲು ತೆರೆದಿದ್ದವು. ಆದರೆ, ಗ್ರಾಹಕರ ಸಂಖ್ಯೆ ತೀರ ಕಡಿಮೆ ಇತ್ತು. ಸಾಲಾಗಿ ನಿಲ್ಲಿಸಿಟ್ಟ ವಾಹನಗಳು, ಕೌಂಟರ್ ಸೇರಿ ಕಚೇರಿಯ ವಿವಿಧೆಡೆ ಆವರಿಸಿದ್ದ ಧೂಳು ಸ್ವಚ್ಛಗೊಳಿಸುವಲ್ಲಿ ಸೀಮಿತ ಸಂಖ್ಯೆಯ ಸಿಬ್ಬಂದಿ ಮಗ್ನರಾಗಿದ್ದರು.

    ಗೋಕುಲ ರಸ್ತೆ, ತಾರಿಹಾಳ ಕೈಗಾರಿಕಾ ವಸಾಹತುಗಳಲ್ಲಿ ಸಣ್ಣ ಉದ್ಯಮಿಗಳು ಘಟಕಗಳ ಬಾಗಿಲು ತೆಗೆದು ಯಂತ್ರಗಳನ್ನು ಸ್ವಚ್ಛಗೊಳಿಸಿದರು. ಕೆಲವರು ಪೂಜೆಯನ್ನೂ ನೆರವೇರಿಸಿ ಟ್ರಯಲ್ ರನ್ ಮಾಡಿ ಸ್ವಲ್ಪ ಹೊತ್ತು ಕುಳಿತು, ಮನೆಗೆ ವಾಪಸಾದದ್ದು ಕಂಡುಬಂತು.

    ಮಾಸ್ಕ್ ಧರಿಸದಿದ್ದರೆ ಪೆಟ್ರೋಲ್ ಇಲ್ಲ: ಕೆಲವು ಪೆಟ್ರೋಲ್ ಬಂಕ್​ಗಳಲ್ಲಿ ಮಾಸ್ಕ್ ಧರಿಸಿದವರ ವಾಹನಗಳಿಗೆ ಮಾತ್ರ ಪೆಟ್ರೋಲ್, ಡೀಸೆಲ್ ಹಾಕಲಾಗುತ್ತಿದೆ. ಮಾಸ್ಕ್ ಇರದವರನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಬಂಕ್​ಗೆ ಬಂದ ಅನೇಕ ಬೈಕ್, ಕಾರುಗಳ ಚಾಲಕರು ಮರಳಿ ಹೋಗಿ ಮಾಸ್ಕ್ ಧರಿಸಿಕೊಂಡು ಬಂದು, ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts