More

    ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಮಾಹಿತಿ ಕೇಂದ್ರದ ಸದಸ್ಯತ್ವ

    ಹುಣಸೂರು: ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ 20ಕ್ಕೂ ಹೆಚ್ಚು ಸಂಜೀವಿನಿ ಒಕ್ಕೂಟದ ಸದಸ್ಯರು ಅರಿವು ಮತ್ತು ಮಾಹಿತಿ ಕೇಂದ್ರ (ಗ್ರಂಥಾಲಯ)ದ ಸದಸ್ಯತ್ವ ಪಡೆದುಕೊಂಡರು.

    ಈ ವೇಳೆ ಅರಿವು ಕೇಂದ್ರದ ಮೇಲ್ವಿಚಾರಕಿ ಶೀಲಾ ಸ್ವಾಮಿಗೌಡ ಮಾತನಾಡಿ, ಮಹಿಳೆಯರು ಕೇವಲ ಅಕ್ಷರಸ್ಥರಾದಲ್ಲಿ ಮಾತ್ರ ಸಾಲದು. ಅವರು ಜ್ಞಾನದಾಹಿಗಳೂ ಆಗಬೇಕು. ವಿಶ್ವದ ಆಗು-ಹೋಗುಗಳನ್ನು ಅರಿಯಬೇಕು. ಸರ್ಕಾರಗಳು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿವೆ. ಇವುಗಳ ಕುರಿತು ಮಾಹಿತಿಯನ್ನು ಸದಸ್ಯರು ಪ್ರತಿದಿನ ಕೇಂದ್ರಕ್ಕೆ ಭೇಟಿ ನೀಡಿ ಓದಿ ತಿಳಿದುಕೊಳ್ಳಬೇಕು. ತಮ್ಮ ಮಕ್ಕಳಿಗೂ ಉಚಿತವಾಗಿ ಸದಸ್ಯತ್ವ ಪಡೆದುಕೊಳ್ಳಲು ಪ್ರೇರೇಪಿಸಬೇಕೆಂದು ಕೋರಿದರು.

    ಸಂಜೀವಿನಿ ಒಕ್ಕೂಟದ ಪ್ರಧಾನ ಪುಸ್ತಕ ಬರಹಗಾರ್ತಿ ಮೀನಾಕ್ಷಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಸುಶಿಕ್ಷಿತ ಸಮಾಜ ಮಾತ್ರ ಅನ್ಯಾಯಗಳ ವಿರುದ್ಧ ದನಿ ಎತ್ತುವ ಪ್ರವೃತ್ತಿ ತೋರುತ್ತದೆ. ಮಹಿಳೆಯರು ತಮ್ಮ ವಿರುದ್ಧ ಅನ್ಯಾಯ, ಅಸಮಾನತೆಗಳ ವಿರುದ್ಧ ದನಿಯೆತ್ತಲು ಮತ್ತು ಪ್ರಗತಿ ಹೊಂದಲು ಅಕ್ಷರ ಜ್ಞಾನ ಮತ್ತು ಅರಿವು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಪಿಡಿಒ ಶಿಲ್ಪಶ್ರೀ, ಒಕ್ಕೂಟದ ಕಾರ್ಯದರ್ಶಿ ರಾಜಮ್ಮ ಹಾಗೂ ಸದಸ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts