More

    ಸಚಿವ ಚವ್ಹಾಣ್​ ಅಭಿಮಾನಿಗಳಿಂದ ಸಾಮಾಜಿಕ ಕಾರ್ಯ

    ಬೀದರ್: ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಜನ್ಮದಿನವನ್ನು ಸೋಮವಾರ ಅಭಿಮಾನಿಗಳಿಂದ ಜಿಲ್ಲೆಯ ವಿವಿಧೆಡೆ ರಕ್ತದಾನ ಶಿಬಿರ, ಸಸಿ ನೆಡುವಿಕೆ, ಗೋವುಗಳಿಗೆ ಮೇವು-ಪೌಷ್ಟಿಕ ಆಹಾರ ವಿತರಣೆ, ಸ್ವಚ್ಛತಾ ಅಭಿಯಾನದಂತಹ ಸಾಮಾಜಿಕ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
    ಕರೊನಾ ಹಿನ್ನೆಲೆಯಲ್ಲಿ ಸಚಿವರು ತಮ್ಮ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಅಭಿಮಾನಿಗಳು ದುಂದು ವೆಚ್ಚ ಸಹ ಮಾಡದೆ ಸಾಮಾಜಿಕ ಸೇವೆಗಳಲ್ಲಿ ತೊಡಗಲು ಕರೆ ನೀಡಿದ್ದರು. ಅದರಂತೆ ಅಭಿಮಾನಿಗಳಿಂದ ಹಲವೆಡೆ ಕಾರ್ಯಕ್ರಮ ಜರುಗಿದವು. ಇದೇ ಮೊದಲ ಸಲ ಸಚಿವರು ತಮ್ಮ ಜನ್ಮದಿನದಂದು ಸ್ಥಳೀಯವಾಗಿ(ಔರಾದ್) ಲಭ್ಯವೂ ಇರಲಿಲ್ಲ.
    ಬಿಜೆಪಿ ನಗರ ಘಟಕದಿಂದ ಗುಂಪಾ ಚನ್ನಬಸವೇಶ್ವರ ಉದ್ಯಾನವದಲ್ಲಿ ಸ್ವಚ್ಛತೆ, ಸಸಿ ನೆಡುವ, ರಾಂಪೂರೆ ಕಾಲನಿಯ ಧ್ಯಾನ ಮಂದಿರದ ಗೋಶಾಲೆ ಹಸುಗಳಿಗೆ ಮೇವು ವಿತರಣೆ ನಡೆಯಿತು. ಬಿಜೆಪಿ ನಗರ ಅಧ್ಯಕ್ಷ ಹಣಮಂತ ಬುಳ್ಳಾ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಪೂಜಾರಿ, ಪ್ರಮುಖರಾದ ಶಶಿ ಹೊಸಳ್ಳಿ, ಗುರುನಾಥ ರಾಜಗೀರಾ ಇದ್ದರು.
    ಔರಾದ್, ಕಮಲನಗರ, ಸಂತಪುರ, ದಾಬಕಾ, ಚಿಂತಾಕಿ, ವಡಗಾಂವ, ಕಶನೂರು ವಲಯಗಳ ಗ್ರಾಮಗಳಲ್ಲಿನ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆದವು. ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 26 ಅಭಿಮಾನಿಗಳು ರಕ್ತದಾನ ಮಾಡಿದರು. ಪಶುಪಾಲನಾ ಇಲಾಖೆಯಿಂದ ಜಿಲ್ಲೆಯ 109 ಪಶು ಚಿಕಿತ್ಸಾಲಯಗಳಲ್ಲಿ ಸಸಿ ನೆಡುವಿಕೆ ಜರುಗಿತು. ಔರಾದ್ ಆದರ್ಶ ವಿದ್ಯಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಔರಾದ್ನಲ್ಲಿ ನಿರ್ಮಾಣ ಹಂತದದಲ್ಲಿರುವ ಸೇವಾಲಾಲ ಭವನ ಮತ್ತು ಶಾಸಕರ ಕಚೇರಿ ಆವರಣದಲ್ಲೂ ಸಸಿ ನೆಡುವಿಕೆ, ಮಾಸ್ಕ್ ವಿತರಣೆ ಜರುಗಿತು.

    ದತ್ತು ಪಡೆದ ಗೋವು: ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯ ಒಂದು ಗೋವು ಸಚಿವರು ದತ್ತು ಪಡೆದರು. ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಅವರು ಸಚಿವರ ಪರವಾಗಿ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದಜಿ ಅವರನ್ನು ಭೇಟಿ ಮಾಡಿ ದತ್ತು ಪ್ರಕ್ರಿಯೆ ನಡೆಸಿಕೊಟ್ಟರು. ಗೋವುಗಳಿಗೆ 50 ಕೆಜಿ ಮಿನರಲ್ ಮಿಕ್ಸ್ಚರ್, 10 ಬ್ಯಾಗ್ ಲವಣ ಮಿಶ್ರಣ ಪೌಷ್ಟಿಕ ಆಹಾರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts