More

    ಸಕ್ರಿಯ ಪ್ರಕರಣ ಪತ್ತೆ ಚುರುಕುಗೊಳಿಸಿ

    ಯಾದಗಿರಿ : ಜಿಲ್ಲಾದ್ಯಂತ P್ಷÀಯರೋಗ ಸಕ್ರಿಯ ಪ್ರಕರಣ ಪತ್ತೆ ಕಾರ್ಯ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಡಿಸಿ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ P್ಷÀಯರೋಗ ನಿಯಂತ್ರಣ ಕುರಿತ ಕಾರ್ಯಪಡೆ ಸಭೆಯಲ್ಲಿ ಮಾತನಾಡಿ, ಅಪಾಯಕಾರಿ ರೋಗದಲ್ಲಿ ಒಂದಾದ P್ಷÀಯ ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ಕಾರೇತರ ಸಂಘ-ಸAಸ್ಥೆಗಳ ಸಮನ್ವಯದಿಂದ ಕಾರ್ಯನಿರ್ವಹಿಸಿ ೨೦೨೫ಕ್ಕೆ ಜಿಲ್ಲೆ ಸಂಪೂರ್ಣ P್ಷÀಯರೋಗ ಮುಕ್ತವಾಗಿಸಲು ಶ್ರಮಿಸುವಂತೆ ಸೂಚಿಸಿದರು.

    ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿ P್ಷÀಯರೋಗ ಸೂP್ಷÀ್ಮ ಪ್ರದೇಶಗಳನ್ನು ಗುರುತಿಸಿ ಸಕ್ರಿಯ ಪ್ರಕರಣ ಪತ್ತೆ ಹಚ್ಚಲು ಕಾರ್ಯಪ್ರವೃತ್ತರಾಗಬೇಕು. ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದಂತೆ ಈಗಲೂ ತಮ್ಮ ಸುತ್ತಲಿನ ಪ್ರದೇಶದಲ್ಲಿರುವ ಐದು ವರ್ಷದೊಳಗಿನ ಮಕ್ಕಳು, ೬೫ ವರ್ಷದೊಳಗಿನವರು ಸೇರಿ ಸಂಶಯಾಸ್ಪದ ರೋಗಿಗಳನ್ನು ಮುಂಚಿತವಾಗಿ ಪತ್ತೆ ಮಾಡಬೇಕು. ಇದಕ್ಕೆ ಸಂಬAಧಿಸಿದAತೆ ಪ್ರತಿ ತಿಂಗಳು ಡಿಸಿ ಕಚೇರಿಗೆ ವರದಿ ಸಲ್ಲಿಸಬೇಕು. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ P್ಷÀಯರೋಗ ಮುಕ್ತ ಮಾಡಲು ಪ್ರಯತ್ನಿಸಬೇಕು. ಕೆಮ್ಮು, ಕÀ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಪತ್ತೆ ಹಚ್ಚಿದ ತP್ಷÀಣ ರೋಗದಿಂದ ಗುಣ ಹೊಂದುವವರೆಗೆ ರೋಗಿಗಳ ಬಗ್ಗೆ ನಿಗಾ ಇಡುವ ಕೆಲಸ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಾಡಬೇಕು ಎಂದರು.

    ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಬೇಕಿದೆ. ಸುಮಾರು ೧೭ ಲ್ಯಾಬ್ ಟೆಕ್ನಿಷಿಯನ್ ಹುದ್ದೆ ಖಾಲಿ ಇದ್ದು, ನೇಮಕ ಪ್ರಕ್ರಿಯೆ ಬಗ್ಗೆ ಸೂಕ್ತ ವರದಿಯೊಂದಿಗೆ ಮಾಹಿತಿ ಸಲ್ಲಿಸಬೇಕು. ಜನವರಿಯಿಂದ ಜುಲೈವರೆಗೆ ಶೇ.೬೮ ಪತ್ತೆ ಹಚ್ಚಲಾಗಿದೆ. ಇದರಲ್ಲಿ ೯೪೮ ಪ್ರಕರಣಗಳಿದ್ದು, ೮೭ (ಡ್ರಗ್ ರೆಸಿಸ್ಟೆಂಟ್ ಟಿಬಿ) ಬಹು ಔಷಧಿಗಳ P್ಷÀಯರೋಗ ಕೇಸ್‌ಗಳಿವೆ. ಪೂರ್ಣ ಚೇತರಿಸಿಕೊಂಡ ರೋಗಿಗಳ ಪ್ರಮಾಣ ಶೇ.೮೫ ಇದೆ ಎಂದು ತಿಳಿಸಿದರು.

    ಜಿಪಂ ಸಿಇಒ ಗರೀಮಾ ಪನ್ವಾರ್, ವೈದ್ಯಕೀಯ ಕಾಲೇಜು ಡೀನ್ ಡಾ.ಹನುಮಂತ ಪ್ರಸಾದ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಗುರುರಾಜ ಹಿರೇಗೌಡ, ಜಿಲ್ಲಾ P್ಷÀಯರೋಗ ನಿಯಂತ್ರಣಾಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ, ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ, ಜಿಲ್ಲಾ ಶಸ್ತçಚಿಕಿತ್ಸಕಿ ಡಾ.ರಿಜ್ವಾನ್ ಆಫ್ರೀನ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಲಕ್ಷ್ಮೀಕಾಂತ ಒಂಟಿಪೀರ, ಡಾ.ಸಾಜೀದ್, ಪೌರಾಯುಕ್ತ ಸಂಗಪ್ಪ ಉಪಾಸೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts